ಕಲ್ಲಡ್ಕ ಭಟ್ಟರಿಗೆ ನಿರೀಕ್ಷಣಾ ಜಮೀನು
ಮಂಗಳೂರು: ಗುರುಪುರ ವಜ್ರದೇಹಿ ಮಠದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ಸೆಶನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಜನವರಿ 5 ರಂದು ಗುರುಪುರ ವಜ್ರದೇಹಿ ಮಠದಲ್ಲಿ ನಡೆದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್, ಮುಸ್ಲಿಂ ಧರ್ಮೀಯರ ಕುರಿತು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಗುರುಪುರದ ಮಹಮ್ಮದ್ ಬಜಪೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಕೋರ್ಟ್ ಕಲ್ಲಡ್ಕ ಭಟ್ಗೆ ಜಾಮೀನು ರಹಿತ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಇಸ್ಲಾಮ್ ಧರ್ಮದ ಕುರಿತು ಅವಹೇಳನ ಮಾಡಿಲ್ಲ, ಹಿಂದೂ ಧರ್ಮದ ನಂಬಿಕೆಗಳನ್ನು ಸರ್ಕಾರ ಮೂಢ ನಂಬಿಕೆ ಎಂದು ನಿಷೇಧಿಸ ಹೊರಟಿರುವ ಕುರಿತು ಭಾಷಣ ಮಾಡಿದ್ದರು ಎಂದು ಭಟ್ ಪರ ವಕೀಲರು ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.