ಮೂರುಕೈ: ಚಿನ್ನದ ಅಂಗಡಿಯಿಂದ ಕಳವು
ಕೋಟ : ಇಲ್ಲಿನ ಮೂರುಕೈ ಎಂಬಲ್ಲಿರುವ ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಇಲ್ಲಿನ ದುರ್ಗಾ ಕಾಂಪ್ಲೆಕ್ಸಿನಲ್ಲಿರುವ ಕುಶ ಎಂಬವರ ಮಾಲಕತ್ವದ ಲಕ್ಷ್ಮಣ ಜುವೆಲ್ಲರಿಗೆ ಕಳ್ಳರು ರು. 11,500 ಮೌಲ್ಯದ ಚಿನ್ನ- ಬೆಳ್ಳಿ ಒಡವೆಗಳನ್ನು ಕಳವು ಮಾಡಿದ್ದಾರೆ ಎಂದು ಕುಶ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.