ಹಲಸಿನ ಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು
ವಿಟ್ಲ: ಇಲ್ಲಿಗೆ ಸಮೀಪದ ಅಳಿಕೆ ಗ್ರಾಮದ ಮಡಿಯಾಳ ಎಂಬಲ್ಲಿ ವ್ಯಕ್ತಿಯೊಬ್ಬರು ಮರದಿಂದ ಹಲಸಿನ ಕಾಯಿ ತೆಗೆಯುತ್ತಿದ್ದ ಸಂದರ್ಭ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಅಳಿಕೆ ಗ್ರಾಮದ ಮಡಿಯಾಳ ನಿವಾಸಿ ಮಾಂಕು ಗೌಡ(70) ಎಂಬವರು ಎರಡು ದಿನಗಳ ಹಿಂದೆ ಮನೆಯ ಸಮೀಪ ಹಲಸು ತೆಗೆಯಲೆಂದು ಏಣಿಯ ಮೂಲಕ ಮರ ಏರಿದ್ದರು. ಈ ಸಂದರ್ಭ ಏಣಿ ಮುರಿದ ಪರಿಣಾಮ ಮರದ ಕೆಳಗಡೆಯಿದ್ದ ಬಾವಿಗೆ ಬಿದ್ದಿದ್ದಾರೆ. ಮಂಗಳವಾರ ಬೆಳಗ್ಗೆ ಮಾಂಕು ಅವರ ಮೃತದೇಹ ಕೆರೆಯಲ್ಲಿ ಇರುವುದರ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಹಾಗೂ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.