ಎಸ್ಸಿಡಿಸಿಸಿ ಶಾಖೆ ಉದ್ಘಾಟನೆ ನಾಳೆ
ಮಂಗಳೂರು: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ 78ನೇ ಶಾಖೆ ಜು. 19 ರಂದು ಬೆಳಗ್ಗೆ 10.30 ಗಂಟೆಗೆ ಬೆಳ್ತಂಗಡಿ ಕೊಕ್ಕಡದಲ್ಲಿ ಉದ್ಘಾಟನೆಗೊಳ್ಳಲಿದೆ. ಕೊಕ್ಕಡ ಅಪೇಕ್ಷಾ ಕಾಂಪ್ಲೆಕ್ಸ್ನಲ್ಲಿ ಕಾರ್ಯಾರಂಭಗೊಳ್ಳುವ ನೂತನ ಶಾಖೆಯನ್ನು ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸುವರು. ಭದ್ರತಾಕೋಶವನ್ನು ನಬಾರ್ಡ್ ಡಿಡಿಎಂ ಪ್ರಸಾದ್ ಹಾಗೂ ಕೊಕ್ಕಡ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಿ. ವಿಶ್ವನಾಥ್ ಶೆಟ್ಟಿ ಗಣಕೀಕರಣ ಉದ್ಘಾಟಿಸುವರು. ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು. ಗ್ರಾಮೀಣ ಪ್ರದೇಶದಲ್ಲಿರುವ ಶಾಖೆಯು ಸಂಪೂರ್ಣ ಗಣಕೀಕೃತಗೊಂಡು ಏಕಗವಾಕ್ಷಿ, ಕೋರ್ ಬ್ಯಾಂಕಿಂಗ್ ಮತ್ತು ಆರ್ಟಿಜಿಎಸ್, ನೆಫ್ಟ್ ಸೌಲಭ್ಯದೊಂದಿಗೆ ಗ್ರಾಹಕರಿಗೆ ತ್ವರಿತಗತಿಯ ಸೇವೆ ನೀಡಲಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.