ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾರ್ಪ್ ಇ-ಲಾಬಿ ಸ್ವಯಂ ಸೇವಾ ಯಂತ್ರ ಉದ್ಘಾಟನೆ

Rashmi Kasaragodu
Updated On : 18 Jul 2014, 12:26 pm

ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್ ವತಿಯಿಂದ ಪಾಂಡೇಶ್ವರ ಕೇಂದ್ರ ಕಚೇರಿಯಲ್ಲಿ ಗುರುವಾರ 24್ಗ7 ಇ-ಲಾಬಿ ಎಂಬ ಸ್ವಯಂ ಸೇವಾ ಯಂತ್ರದ ಕೇಂದ್ರವನ್ನು ಕಾರ್ಪ್ ಬ್ಯಾಂಕ್ ಅಧ್ಯಕ್ಷ ಎಸ್. ಆರ್. ಬನ್ಸಾಲ್ ಉದ್ಘಾಟಿಸಿದರು. ಇ-ಲಾಬಿ ಕೇಂದ್ರವು ಎಟಿಎಂ, ನಗದು, ಚೆಕ್ ಠೇವಣಿ ಹಾಗೂ ಸ್ವಯಂ ಸೇವಾ ಪಾಸ್‌ಬುಕ್ ಪ್ರಿಂಟರ್ ಒಳಗೊಂಡಂತೆ ಬ್ಯಾಂಕಿನ ಪ್ರಮುಖ ನಾಲ್ಕು ಸೇವೆಗಳನ್ನು ಎಲೆಕ್ಟ್ರಾನಿಕ್ಸ್ ಮೂಲಕ ಮಾಡಲಾಗುತ್ತಿದೆ. ಗ್ರಾಹಕರು ತಮ್ಮ ಬಿಡುವಿನ ಯಾವುದೇ ಸಮಯದಲ್ಲಿ ತಮಗೆ ಬೇಕಾದವರಿಗೆ ಹಣ ಕಳುಹಿಸಬಹುದಾದ ಸುಲಭ ಸಾಧ್ಯವಾಗಿದೆ ಎಂದರು. ಇದರಿಂದ ಗ್ರಾಹಕರು ಶಾಖೆಯಲ್ಲಿ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ ತ್ವರಿತ ಸೇವೆ, ಸರಳ ಮತ್ತು ಉಪಯೋಗಿಸಲು ಸುಲಭವಾಗಲಿದೆ. ಬ್ಯಾಂಕಿನ ಎಲ್ಲ ಉಳಿತಾಯ ಮತ್ತು ಚಾಲ್ತಿ ಖಾತೆ ಗ್ರಾಹಕರಿಗೆ ಈ ಸೇವೆ ಲಭ್ಯವಿದೆ. ಸದ್ಯದಲ್ಲಿ ನಗರದ ಕಾರ್‌ಸ್ಟ್ರೀಟ್ ಸೇರಿದಂತೆ 2 ಕಡೆ ಕೇಂದ್ರ ಶೀಘ್ರದಲ್ಲಿ ಕೇಂದ್ರ ಕಾರ್ಯಾಚರಿಸಲಿದೆ ಎಂದರು.  ನಗದು ಠೇವಣಿ ಯಂತ್ರದ ಟ್ರೇಯಲ್ಲಿ ಒಟ್ಟು ರು.  49,900 ಮೊತ್ತ ಠೇವಣಿ ಮಾಡಬಹುದು. ರು.  50, 100, 500, 1,000 ನೋಟಿನ 40 ನೋಟುಗಳ ಕಂತೆಯನ್ನು ಹಾಕಬಹುದು. ಪಾಸ್‌ಬುಕ್‌ನಲ್ಲಿ ತಮ್ಮ ಖಾತೆಯ ದಾಖಲಾತಿಯನ್ನು ನೋಂದಾಯಿಸುವ ಯಂತ್ರ ಕೂಡ ಇಲ್ಲಿದೆ ಎಂದು ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮರ್ ಲಾಲ್ ದೌಲ್ತಾನಿ ಹೇಳಿದರು. ಎಕಿಕ್ಯೂಟಿವ್ ಡೈರೆಕ್ಟರ್ ಬಿ.ಕೆ. ಶ್ರೀವತ್ಸವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement