ನಾಪತ್ತೆಯಾಗಿದ್ದ ವ್ಯಕ್ತಿ ಶವ ಪತ್ತೆ
ಸುಬ್ರಹ್ಮಣ್ಯ: ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ಬಾಳುಗೋಡು ಗ್ರಾಮದ ಕುಡುಮುಂಡೂರು ಕಟ್ಟೆಮನೆ ನಿವಾಸಿ ಜಯಂತ ಗೌಡ (50) ಎಂಬವರ ಶವ ಶನಿವಾರ ಐನಕಿದುವಿನ ಇಜ್ಜಿನಡ್ಕ ಎಂಬಲ್ಲಿ ಹೊಳೆಯಲ್ಲಿ ಪತ್ತೆಯಾಗಿದೆ.
ಸ್ಥಳಿಯ ನಿವಾಸಿ ಕೃಷ್ಣ ಗುಂಡಡ್ಕ ಎಂಬವರು ಬೆಳಗ್ಗೆ ಹೊತ್ತು ಹೊಳೆ ಬದಿಗೆ ತೆಂಗಿನಕಾಯಿ ಹೆಕ್ಕಲೆಂದು ಹೋಗಿದ್ದ ವೇಳೆ ಶವವೊಂದು ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಬಳಿಕ ಸ್ಥಳಿಯರ ಮತ್ತು ಸಂಬಂಧ ಪಟ್ಟವರಿಗೆ ತಿಳಿಸಿದ್ದಾರೆ.
ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಜಯಂತ ಗೌಡರ ಕುಟುಂಬವನ್ನು ಕರೆಸಿ ನೋಡಿದಾಗ ಕುಟುಂಬದವರು ಶವ ಜಯಂತರದ್ದು ಎಂದು ಗುರುತಿಸಿದ ಮೇರೆಗೆ ಶವವನ್ನು ಮರಣೋತ್ತರ ಪರಿಕ್ಷೆಗೆ ಒಳಪಡಿಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಮದ್ಯ ವ್ಯಸನಿಯಾಗಿದ್ದ ಮೃತರು ಹೊಳೆ ದಾಟುವ ಸಂದರ್ಭ ನೀರು ಪಾಲಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.