ಬೆಳಂದೂರು ಕಾಲೇಜ್ ಕಟ್ಟಡ ಶೀಘ್ರ ನಿರ್ಮಾಣ: ರೈ ಭರವಸೆ
ಪುತ್ತೂರು: ಬೆಳಂದೂರು ಪ್ರಥಮ ದರ್ಜೆ ಕಾಲೇಜನ್ನು ನ್ಯೂ ಮಾಡೆಲ್ ಕಾಲೇಜು ಆಗಿ ಪರಿವರ್ತಿಸಿ, ವರ್ಷದೊಳಗೆ ಕಟ್ಟಡ ನಿರ್ಮಾಣ ಮಾಡಿ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಭರವಸೆ ನೀಡಿದರು. ಅವರು ಶನಿವಾರ ಸಂಜೆ ಬೆಳಂದೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ಶೀಘ್ರದಲ್ಲಿ ಬೆಳಂದೂರು ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ತಿಳಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಸಿ.ಪಿ. ಜಯರಾಂ ಗೌಡ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಮಹಮ್ಮದ್, ಇಬ್ರಾಹಿಂ ಕೋಡಿಜಾಲ್, ಮಿಥುನ್ ರೈ, ಪಿ.ಪಿ. ವರ್ಗೀಸ್, ಡಾ. ರಘು, ಬೆಳಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ ಪೂಜಾರಿ, ಸರಸ್ವತಿ ಕಾಮತ್, ದಿವ್ಯಪ್ರಭಾ ಚಿಲ್ತಡ್ಕ ಇದ್ದರು.