ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಾಲ ಬಾಕಿ ವಸೂಲಿಗೆ ಕ್ರಮಕ್ಕೆ ಆಗ್ರಹ

Rashmi Kasaragodu
Updated On : 20 Jul 2014, 1:57 am

ಮಂಗಳೂರು:ರಾಜ್ಯದಲ್ಲಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಗೆ ವಿವಿಧ ಕಂಪನಿಗಳಿಂದ ರು. 2,04,249 ಕೋಟಿ ಸಾಲ ಮರುಪಾವತಿಗೆ ಬಾಕಿ ಇದ್ದು, ಇದರ ವಸೂಲಿಗೆ ಬ್ಯಾಂಕ್‌ಗಳು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ ಆಗ್ರಹಿಸಿದೆ. 2008-09ರಲ್ಲಿ ರು. 59,972 ಕೋಟಿ ಕಂಪನಿಗಳಿಂದ ಬರಲು ಬಾಕಿ ಇತ್ತು. ಈಗ ಅಸಲು, ಬಡ್ಡಿ ಸೇರಿ ನಾಲ್ಕು ಪಟ್ಟು ಆಗಿದೆ. ಒಟ್ಟು ವಹಿವಾಟಿನಲ್ಲಿ ಶೇ.50 ಸಾಲ ಭರ್ತಿಗೊಳಿಸುವ ಪ್ರಕ್ರಿಯೆಗೆ ವ್ಯಯವಾಗುತ್ತದೆ. 780  ವಹಿವಾಟು ಕಂಪನಿಗಳು ಸಾಲ ಮರುಪಾವತಿ ಮಾಡಿಲ್ಲ. ಇದರಿಂದ ಸಾಲ ನೀಡಿದ ಬ್ಯಾಂಕ್‌ಗಳಿಗೆ ಆರ್ಥಿಕ ಹೊರೆಯಾಗಿದ್ದು, ಸಾಲ ವಸೂಲಿಗೆ ಆರ್‌ಬಿಐ ಸಹಕಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ವಸೂಲಾದ ಮೊತ್ತವನ್ನು ಬಡಜನರ ಏಳ್ಗೆಗೆ ಬಳಸಬೇಕು ಎಂದು ಸಂಘಟನೆ ಜತೆ ಕಾರ್ಯದರ್ಶಿ ಬಿ.ಎಂ.ಮಾಧವ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಸದಸ್ಯರಾದ ರಾಜೇಶ್ ಆಚಾರ್, ಬಿ.ವಿ.ಗಿರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement