ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಲ್ಲು ಗಣಿಗಾರಿಕೆ ತಾತ್ಕಾಲಿಕ ಸ್ಥಗಿತ ಸೂಚನೆ; ಗುಂಡಿ ಮುಚ್ಚಲು ಗಡುವು

Mainashree
Updated On : 21 Jul 2014, 10:37 am

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಪಟ್ಟಾ ಜಮೀನು ಮತ್ತು ಸರ್ಕಾರಿ ಜಮೀನುಗಳಲ್ಲಿ ಕೆಂಪು ಕಲ್ಲು ಮತ್ತು ಕಟ್ಟಡದ ಕಲ್ಲು ಗಣಿಗಾರಿಕೆಯ ಹೊಂಡಗಳನ್ನು ಮುಚ್ಚಲು ಜಿಲ್ಲಾಡಳಿತ 5 ದಿನ ಗಡು ನೀಡಿದೆ. ಅಲ್ಲಿವರೆಗೆ ಕಲ್ಲುಗಣಿಗಾರಿಕೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ಕಲ್ಲುಗಣಿಗಾರಿಕೆ ನಡೆಸಿ ಗುಂಡಿ ಮುಚ್ಚದಿರುವುದರಿಂದ ಅಧಿಕ ಮಳೆಯಿಂದ ಈ ಗುಂಡಿ ಮತ್ತು ಹೊಂಡಗಳಲ್ಲಿ ನೀರು ತುಂಬಿರುತ್ತದೆ. ಇದರ ಅರಿವಿಲ್ಲದೆ ಮಕ್ಕಳು ಆಟವಾಡಲು ತೆರಳಿ ಅದರಲ್ಲಿ ಬಿದ್ದು ಜೀವಹಾನಿ ಸಂಭವಿಸುತ್ತದೆ. ಈ ರೀತಿ ಅವಘಡ ತಡೆಗಟ್ಟುವ ಸಲುವಾಗಿ ಸ್ಥಳೀಯ ಗ್ರಾಮ ಪಂಚಾಯ್ತಿಗಳು ತಮ್ಮಲ್ಲಿರುವ ಗಣಿಗಾರಿಕೆ ಹೊಂಡಗಳನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕು. ಪಿಡಿಒ ಮತ್ತು ಗ್ರಾಮಕರಣಿಕರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ತಗಲುವ ವೆಚ್ಚವನ್ನು ಜಮೀನು ಮಾಲಕರಿಂದ ಮತ್ತು ಗುತ್ತಿಗೆದಾರರಿಂದ ವಸೂಲಿ ಮಾಡಬೇಕು. ಗಣಿಗಾರಿಕೆ ಗುಂಡಿ ಕಂಡುಬಂದಲ್ಲಿ ಗ್ರಾಮ ಪಂಚಾಯ್ತಿಗೆ ದೂರು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement