ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಂಪನಿ ಆಡಿಟ್‌ನಲ್ಲಿ ಮಹಿಳಾ ದೌರ್ಜನ್ಯ ತಡೆ ಕ್ರಮ ಕಡ್ಡಾಯ ದಾಖಲು

Rashmi Kasaragodu
Updated On : 24 Jul 2014, 11:57 am

ಮಂಗಳೂರು: ಕೈಗಾರಿಕಾ ಕಂಪನಿಗಳು ಈ ವರ್ಷದಿಂದ ವಾರ್ಷಿಕ ಲೆಕ್ಕಪತ್ರ ವರದಿ ಸಲ್ಲಿಸುವ ವೇಳೆ ಮಹಿಳಾ ದೌರ್ಜನ್ಯ ತಡೆಗೆ ಕೈಗೊಂಡ ಕ್ರಮದ ಬಗ್ಗೆ ಕಡ್ಡಾಯ ವಿವರ ಒದಗಿಸಬೇಕು. ತಪ್ಪಿದಲ್ಲಿ ಸಂಬಂಧಿತ ಇಲಾಖೆಗೆ ರು. 50 ಸಾವಿರ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ.
 ಮಂಗಳೂರಿನ ಕೆನರಾ ಚೇಂಬರ್‌ನಲ್ಲಿ ಬುಧವಾರ ಆಯೋಜಿಸಿದ ವ್ಯಾಪಾರ ಅಭಿವೃದ್ಧಿಗೆ ತಾಂತ್ರಿಕತೆ ಬಳಕೆ ಕುರಿತ ವಿಚಾರ ಸಂಕಿರಣದಲ್ಲಿ ಐ ಕಂಪ್ಲೀ ಆ್ಯಶ್ ಕಂಪನಿ ಮುಖ್ಯಸ್ಥ ವಿನೀತ್ ಭಟ್ ಈ ಮಾಹಿತಿ ನೀಡಿದರು.
 ಕೈಗಾರಿಕೆಗಳು ಇದುವರೆಗೆ ವಾರ್ಷಿಕ ಲಾಭ ನಷ್ಟದ ಲೆಕ್ಕಾಚಾರವನ್ನು ಮಾತ್ರ ಕೊಡುತ್ತಿದ್ದವು. ಇನ್ನು ತಮ್ಮ ಕಚೇರಿಯಲ್ಲಿ ಮಹಿಳಾ ದೌರ್ಜನ್ಯ ತಡೆಗೆ ಕೈಗೊಂಡ ಕ್ರಮಗಳೇನು ಎಂಬುದನ್ನು ಪ್ರತಿ ವರ್ಷ ಅಡಿಟ್ ಜತೆ ನೀಡಬೇಕು. ಇದಕ್ಕಾಗಿ ಕೈಗಾರಿಕಾ ಸಂಸ್ಥೆಗಳಿಗೆ ನಮ್ಮ ಕಂಪನಿ ತರಬೇತಿ ನೀಡುತ್ತದೆ. ಮಹಿಳಾ ಸುರಕ್ಷೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿಸಿಕೊಡಲಾಗುತ್ತದೆ ಎಂದರು.
 ಮುಖ್ಯವಾಗಿ ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಹೇಳಿಕೊಡಲಾಗುವುದು. ದೌರ್ಜನ್ಯ ನಡೆದಾಗ ಯಾರಿಗೆ, ಹೇಗೆ ದೂರು ನೀಡಬೇಕು? ದೌಜನ್ಯದಿಂದ ಪಾರಾಗುವ ಬಗೆ ಇತ್ಯಾದಿ ಬಗ್ಗೆ ಮುಕ್ಕಾಲು ಗಂಟೆಯ ತರಬೇತಿ ಪ್ಯಾಕೇಜ್‌ನಲ್ಲಿ ತಿಳಿಸಲಾಗುವುದು ಎಂದರು.
ಹೋಸ್ಟ್‌ಗೇಟರ್ ಡಾಟ್ ಇನ್ ಸೌಲಭ್ಯದ ಬಗ್ಗೆ ವ್ಯವಸ್ಥಾಪಕ ವೈಭವ ಪೈ ಮಾತನಾಡಿ, ಎಲ್ಲ ವಿಧದ ಕೈಗಾರಿಕೆಗಳ ಮಾಹಿತಿ, ಸಿದ್ಧ ವಸ್ತುಗಳ ಮಾರುಕಟ್ಟೆ ವಿವರ ಕೈಗಾರಿಕಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಆನ್‌ಲೈನ್ ವಹಿವಾಟನ್ನೂ ಈ ಕಂಪನಿ ನಿರ್ವಹಿಸುತ್ತದೆ. ಭಾರತೀಯ ಮತ್ತು ಏಷ್ಯಾದ ವಹಿವಾಟುದಾರರಿಗೆ ನೆರವಾಗುತ್ತೇವೆ ಎಂದು ಹೇಳಿದರು. ಕೆಸಿಸಿಐ ಐಟಿ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಕಲ್ಬಾವಿ, ಗೌರವ ಕಾರ್ಯದರ್ಶಿ ಜೀವನ್ ಸಲ್ದಾನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement