ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾಡಾನೆ ನಿರಂತರ ದಾಳಿ: ಅಪಾರ ಬೆಳೆ ಹಾನಿ

Rashmi Kasaragodu
Updated On : 24 Jul 2014, 11:58 am

ಸುಬ್ರಹ್ಮಣ್ಯ: ಕೊಲ್ಲಮೊಗ್ರು ಮತ್ತು ಮಡಪ್ಪಾಡಿ ಗ್ರಾಮಗಳ ಗಡಿಭಾಗ ದೊಡ್ಡಕಜೆ ಕರಂಗಲ್ಲು ಪ್ರದೇಶದಲ್ಲಿ ಕಳೆದ ಎರಡು- ಮೂರು ದಿನಗಳಿಂದ ನಿರಂತರವಾಗಿ ಕಾಡಾನೆಗಳು ತೋಟಗಳಿಗೆ ಲಗ್ಗೆ ಇಡುತ್ತಿದ್ದು, ಅಪಾರ ಬೆಳೆ ಹಾನಿ ಮಾಡಿವೆ.  ಕೃಷಿಕ ಜಯರಾಮ ಕರಂಗಲ್ಲು ಎಂಬವರಿಗೆ ಸೇರಿದ ತೋಟದಲ್ಲಿ 10 ಕಂಗು, 4 ತೆಂಗಿನ ಗಿಡ, 125ಕ್ಕೂ ಹೆಚ್ಚು ಬಾಳೆಗಿಡ, ವಾಸುದೇವ ಗೌಡ ದೊಡ್ಡಕಜೆ ಎಂಬವರಿಗೆ ಸೇರಿದ 2 ಅಡಕೆ, 2 ತೆಂಗಿನ ಗಿಡ, ಕೆಂಚಪ್ಪ ಅವರ ತೋಟದಲ್ಲಿ 50ಕ್ಕೂ ಹೆಚ್ಚುಬಾಳೆ ಗಿಡಗಳನ್ನು ಕಾಡಾನೆಗಳು ನಾಶಪಡಿಸಿವೆ.  ಅಲ್ಲದೆ, ಸ್ಥಳೀಯ ಲೋಕಯ್ಯ ಗೌಡ, ವೆಂಕಪ್ಪ ಗೌಡರ ತೋಟಗಳಿಗೂ ದಾಳಿ ನಡೆಸಿದ ಕಾಡಾನೆ ಹಿಂಡು ಬೆಳೆ ಹಾನಿ ಮಾಡಿ, ಕೃಷಿ ಸಲಕರಣೆಗಳನ್ನು ಕೂಡ ಹಾಳುಗೆಡಹಿವೆ. ಹಾನಿಗೊಳಗಾದ ಕೃಷಿಕರ ತೋಟಗಳನ್ನು ಅರಣ್ಯ ವೀಕ್ಷಕ ಸಿಬ್ಬಂದಿ ಪರಿಶೀಲಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement