ರಸ್ತೆಗೆ ಮರ ಬಿದ್ದು ಸಂಚಾರ ವ್ಯತ್ಯಯ
ಬೆಳ್ತಂಗಡಿ: ಮಂಗಳೂರು-ಧರ್ಮಸ್ಥಳ ಹೆದ್ದಾರಿಯ ಪಣಕಜೆ ಎಂಬಲ್ಲಿ ರಸ್ತೆಗೆ ಭಾರಿ ಗಾತ್ರ ಮರ ಬಿದ್ದು ಕೆಲ ಹೊತ್ತು ಸಂಚಾರ ಸ್ಥಗಿತಗೊಂಡ ಘಟನೆ ಬುಧವಾರ ನಡೆದಿದೆ. ಬೃಹತ್ ಆಲದ ಮರ ಸಂಜೆ ವೇಳೆ ಬಿದ್ದ ಪರಿಣಾಮ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬರುವ ಬಸ್ ಸಂಚಾರ ಸುಮಾರು ಗಂಟೆಯ ಕಾಲ ಸ್ಥಗಿತಗೊಂಡಿತು. ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಎರಡು ಕಂಬಗಳು ಉರುಳಿವೆ. ಇದರಿಂದ ಪರಿಸರದ ಗ್ರಾಮಗಳಿಗೆ ವಿದ್ಯುತ್ ಇಲ್ಲದಂತಾಗಿದೆ. ಸ್ಥಳೀಯರ ಮತ್ತು ಮೆಸ್ಕಾಂ ಸಿಬ್ಬಂದಿ ಸಹಕಾರದಿಂದ ಕೂಡಲೇ ಮರ ಕತ್ತರಿಸಿ ತೆರವುಗೊಳಿಸಲಾಯಿತು.