ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಈದ್ಗಾ ಪ್ರಾರ್ಥನೆ: ಸಂಚಾರ ಮಾರ್ಪಾಟು ನಾಳೆಯಿಂದ

Rashmi Kasaragodu
Updated On : 27 Jul 2014, 1:03 am

ಮಂಗಳೂರು: ನಗರದ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ 28 ಮತ್ತು 29ರಂದು ಬೆಳಗ್ಗೆ 6.30ರಿಂದ ಪ್ರಾರ್ಥನೆ ಮುಗಿಯುವವರೆಗೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ, ಹೆಚ್ಚುವರಿ ಜಿಲ್ಲಾ ಕಾರ್ಯನಿರ್ವಾಹಕ ದಂಡಾಧಿಕಾರಿ ಆದೇಶಿಸಿದ್ದಾರೆ. ಬಾವುಟಗುಡ್ಡೆ ಮುಖೇನ ಡಾ.ಅಂಬೇಡ್ಕರ್ ವೃತ್ತಕ್ಕೆ ತೆರಳುವ ವಾಹನಗಳು ಕೆ.ಎಸ್.ರಾವ್ ರಸ್ತೆ ಯಾ ಎಲ್‌ಎಚ್‌ಎಚ್ ಮುಖಾಂತರ ಫಳ್ನೀರ್ ರಸ್ತೆ ಮೂಲಕ ಸಂಚರಿಸುವುದು.  ಅರವಿಂದ ಕಡೆಯಿಂದ, ಡಾ.ಅಂಬೇಡ್ಕರ್ ವೃತ್ತದ ಕಡೆಯಿಂದ, ಸಿಟಿ ಸೆಂಟರ್‌ನಿಂದ ಬಾವುಟಗುಡ್ಡೆಗೆ ಬರುವ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಬಾವುಟಗುಡ್ಡೆಯಲ್ಲಿ ಸಾಧ್ಯವಾದಷ್ಟು ರಸ್ತೆ ಬದಿ ತಾತ್ಕಾಲಿತಕವಾಗಿ ಪಾರ್ಕ್ ಮಾಡಬೇಕಿದೆ. ಹಂಪನಕಟ್ಟೆಯಿಂದಲೇ ವಾಹನ ಸಂಚಾರ ತಡೆಯಲಾಗುವುದು. ನಗರ ಗ್ರಂಥಾಲಯದಿಂದ ವಿಜಯಾ ಬ್ಯಾಂಕ್‌ವರೆಗೆ ರಸ್ತೆಯ ಎಡಬದಿ ಮಾತ್ರ ವಾಹನ ತಾತ್ಕಾಲಿಕ ಪಾರ್ಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement