ತಮಿಳರಿಗೆ ಜಾತಿ ಸರ್ಟಿಫಿಕೆಟ್; ಆ.2ರಂದು ರೈಗೆ ಸನ್ಮಾನ
ಸುಳ್ಯ: ತಮಿಳರಿಗೆ ಜಾತಿ ಸರ್ಟಿಫಿಕೇಟ್ ಸಿಗಲು ಕಾರಣರಾದ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ಸರ್ಕಾರದ ಪ್ರತಿನಿಧಿಯಾದ ಸಚಿವ ಬಿ.ರಮಾನಾಥ ರೈ ಅವರಿಗೆ ಆ.2ರಂದು ಸುಳ್ಯದ ಕೇರ್ಪಳ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ತಮಿಳರ ವಿವಿಧ ಸಂಘಟನೆಗಳ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಮಿಕ ಮುಖಂಡ ಎ.ಎಸ್. ಚಂದ್ರಲಿಂಗಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತೋಟ ತೊಳಿಲಾಳರ ಸಂಘ, ಜನರಲ್ ಎಂಪ್ಲಾಯಿಸ್ ಯೂನಿಯನ್, ರಬ್ಬರ್ ಕಾರ್ಮಿಕರ ಸಂಘ, ಕರ್ನಾಟಕ ರಬ್ಬರ್ ಪ್ಲಾಂಟೇಶನ್ ಇಂಡಸ್ಟ್ರಿಯಲ್ ಯೂನಿಯನ್ ಇದರ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಆಯ್ದ ಫಲಾನುಭವಿಗಳಿಗೆ ಅಂದು ಜಾತಿ ಪ್ರಮಾಣಪತ್ರ ವಿತರಿಸಲಾಗುವುದು ಎಂದು ಹೇಳಿದರು. ಜಾತಿ ಸರ್ಟಿಫಿಕೇಟ್ ಸಿಗಲು ಎಲ್ಲರ ಹೋರಾಟ ಕಾರಣವಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಾಲಚಂದ್ರ, ಲೋಕನಾಥ ಕಲ್ಲೋಣಿ ಇದ್ದರು.