ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಹಾಯಧನ ಬಿಡುಗಡೆಗೆ ಆಂದೋಲನ: ಆಶಾ ತಿಮ್ಮಪ್ಪ

Rashmi Kasaragodu
Updated On : 27 Jul 2014, 1:05 am

ಸುಳ್ಯ:  ಬಸವ ವಸತಿ ಹಾಗೂ ಇಂದಿರಾ ಆವಾಸ್ ಯೋಜನೆಗಳಡಿ ಮನೆ ನಿರ್ಮಿಸಿದ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಆಗದೇ ಸಮಸ್ಯೆ ಉಂಟಾಗಿದ್ದು, ತೊಡಕುಗಳನ್ನು ನಿವಾರಿಸಿ ಸಹಾಯಧನ ಬಿಡುಗಡೆಗೆ ದಕ್ಷಿಣ ಕನ್ನಡ ಜಿ.ಪಂ. ವತಿಯಿಂದ ಆಂದೋಲನ ರೀತಿಯಲ್ಲಿ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಹೇಳಿದ್ದಾರೆ. ಸಹಾಯಧನ ಬಿಡುಗಡೆ ಆಗದೇ ಸಮಸ್ಯೆ ಎದುರಾಗಿರುವ ಕುರಿತು ಗುರುವಾರ ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ನವೀನ್ ಕುಮಾರ್ ಮೇನಾಲ, ಕೆ.ಎಸ್. ದೇವರಾಜ್, ಸರಸ್ವತಿ ಕಾಮತ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಮತಾ ಬೊಳುಗಲ್ಲು, ಕಾರ್ಯನಿರ್ವಹಣಾಧಿಕಾರಿ ಮಲ್ಲೇಶಪ್ಪ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement