ವಿಜಯಾ ಕಾಲೇಜಿನಲ್ಲಿ ಕಾರ್ಗಿಲ್ ದಿನಾಚರಣೆ
ಮೂಲ್ಕಿ: ಎನ್ಸಿಸಿಯಲ್ಲಿ ಭಾಗವಹಿಸುವ ಮೂಲಕ ಶಿಸ್ತಿನ ಜೀವನ ಬೆಳೆಸುವ ಮೂಲಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಿದ್ದು ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯಲ್ಲಿ ಸೇರಿ ದೇಶ ಸೇವೆ ಮಾಡಬೇಕೆಂದು ಎನ್ಸಿಸಿ ಮಂಗಳೂರು ಬೆಟಾಲಿಯನ್ನ ಕಮಾಂಡಿಂಗ್ ಆಫೀಸರ್ ಕ್ಯಾಪ್ಟನ್ ಎಂ.ಸಿ. ಬೆಳ್ಳಿಯಪ್ಪ ಹೇಳಿದರು. ಮೂಲ್ಕಿ ವಿಜಯ ಕಾಲೇಜಿನ ಎನ್ಸಿಸಿ ವಿಭಾಗದಲ್ಲಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಎನ್ಸಿಸಿ ಕೆಡೆಟ್ಗಳಿಗೆ ರ್ಯಾಂಕ್ ಪ್ರದಾನ ಹಾಗೂ ಕಾರ್ಗಿಲ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ. ಆರ್ ಕುಡ್ವ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಕೆ.ಆರ್. ಶಂಕರ್, ನೇವಲ್ ವಿಭಾಗದ ಸಬ್ ಲೆಫ್ಟಿನೆಂಟ್ ಎಚ್ಜಿ ನಾಗರಾಜ್ ನಾಯಕ್, ಆರ್ಮಿ ವಿಭಾಗದ ನಿತಿನ್ ಎಸ್.ಎಸ್. ಮತ್ತಿತರರು ಉಪಸ್ಥಿತರಿದ್ದರು.