ಪ್ರಣಾಳಿಕೆ ಭರವಸೆ ಈಡೇರಿಸುತ್ತೇವೆ:
ಮಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಕೊಡುಗೆ ಲಭಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.
ಒಳ್ಳೆಯ ದಿನಗಳ ಬರಲಿವೆ ಎಂಬುದಕ್ಕೆ ಇದು ಶುಭ ಸೂಚನೆ. ಜನಪ ಅಪೇಕ್ಷೆಗೆ ಅನುಗುಣವಾಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಡಿ.ವಿ.ಸದಾನಂದ ಗೌಡರ ಮೂಲಕ ರೂಪಿಸಲಿದೆ. ಜಿಲ್ಲಾ ಬಿಜೆಪಿ ರೂಪಿಸಿ ಸ್ಥಳೀಯ ಚುನಾವಣೆ ಪ್ರಣಾಳಿಕೆಯ ಎಲ್ಲ ಅಂಶಗಳನ್ನು ಈಡೇರಿಸಲಾಗುವುದು ಎಂದರು. ನರೇಂದ್ರ ಮೋದಿ ಪ್ರಧಾನಿ ಆಗುವ ಅಪೂರ್ವ ಕ್ಷಣ ಜೀವನದಲ್ಲಿಯೇ ಅತ್ಯಂತ ಸಂಭ್ರಮದ ಕ್ಷಣ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದ್ದಾರೆ. ಬಿಜೆಪಿ ತನ್ನ ಸ್ವಂತ ಬಲದಲ್ಲಿ ಆಧಿಕಾರದ ಚುಕ್ಕಾಣಿ ಹಿಡಿದಿದೆ. ಇದುವರೆಗೆ ಭಾರತೀಯ ನೀತಿಗಳು ಹಿಂದಿನ ಕಾಂಗ್ರೆಸ್ ನೀತಿಗೆ ಅನುಗುಣವಾಗಿ ನಡೆಯುತ್ತಿತ್ತು. ಇದೀಗ ಹೊಸ ಶಖೆ ಆರಂಭವಾಗಿದೆ. ಪ್ರಧಾನಿ ಹೊಸ ಪಥದಲ್ಲಿ ಭಿನ್ನ ದೃಷ್ಟಿಯಲ್ಲಿ ದೇಶ ಮುನ್ನಡೆಯಲಿದೆ ಎಂದರು.
ಪ್ರತಾಪ್ಸಿಂಹ