ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಡಕೆ ಕೊಳೆರೋಗ ಪರಿಹಾರ ವಿತರಣೆ ಸ್ಥಗಿತವಿಲ್ಲ: ರೈ ಭರವಸೆ

Mainashree
Updated On : 4 Jun 2014, 10:50 am

ಬಂಟ್ವಾಳ:  ಅಡಕೆ ಕೊಳೆ ರೋಗದಿಂದ ಸಂತ್ರಸ್ತ ರೈತರಿಗೆ ಯಾವುದೇ ಕಾರಣಕ್ಕೂ ಪರಿಹಾರ ವಿತರಣೆ ಸರ್ಕಾರ ನಿಲ್ಲಿಸುವುದಿಲ್ಲ, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭರವಸೆ ನೀಡಿದ್ದಾರೆ.
ಕಂದಾಯ ಇಲಾಖೆ ವತಿಯಿಂದ  ಮಂಗಳವಾರ ಬಿ.ಸಿ.ರೋಟ್‌ನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆದ ಅಡಕೆ ಬೆಳೆ ರೋಗಕ್ಕೆ ಪರಿಹಾರ ಚೆಕ್ ವಿತರಣೆ, ರಾಷ್ಟ್ರೀಯ ಕುಟುಂಬ ಸಹಾಯಧನ ಚೆಕ್ ವಿತರಣೆ, ಪಿಂಚಣಿಗಳ ಮಂಜೂರಾತಿ ಆದೇಶ ಪತ್ರದ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.  1997 ಫಲಾನಿಭವಿಗಳಿಗೆ ಅಡಕೆ ಕೊಳೆ ರೋಗದ ಪರಿಹಾರ ಚೆಕ್, 554 ಫಲಾನುಭವಿಗಳಿಗೆ ರಾಷ್ಟ್ರೀಯ ಸಹಾಯಧನ ಚೆಕ್ ಹಾಗೂ 364 ಫಲಾನುಭವಿಗಳಿಗೆ ಪಿಂಚಣಿ ಆದೇಶ ಮಂಜೂರಾತಿ ಪತ್ರ ರೈ ವಿತರಿಸಿದರು.
ಜಿ.ಪಂ. ಸದಸ್ಯರಾದ ಮಮತಾ ಗಟ್ಟಿ, ಎಂ.ಎಸ್.ಮಹಮ್ಮದ್, ಮಾಜಿ ಸದಸ್ಯ ಎ.ಸಿ. ಭಂಡಾರಿ,  ತಾ.ಪಂ. ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ್, ಉಪಾಧ್ಯಕ್ಷ ಆನಂದ ಶಂಭೂರು, ಸದಸ್ಯರಾದ ಮಾದವ ಮಾವೆ, ರಮೇಶ್ ಕುಡ್ಮೇರ್, ಐಡಾ ಸುರೇಶ್, ಸಂಪತ್ ಕುಮಾರ್ ಶೆಟ್ಟಿ, ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ತಹಸೀಲ್ದಾರ್ ಮಲ್ಲೇಸ್ವಾಮಿ ಇದ್ದರು.  
3ಬಿಟಿಡಬ್ಲ್ಯೂ1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement