ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಮಾಧಿ ಸ್ಥಳಾಂತರಕ್ಕೆ ವಿರೋಧ

Mainashree
Updated On : 7 Jun 2014, 10:03 am

ಮಂಗಳೂರು: ಕೊಲ್ಲೂರು ನಿತ್ಯಾನಂದ ಆಶ್ರಮದಲ್ಲಿ ವಿಮಲಾನಂದ ಸ್ವಾಮಿ ಸಮಾಧಿ ಸ್ಥಳಾಂತರಕ್ಕೆ ಜಿಲ್ಲಾಡಳಿತ ಒಪ್ಪಿಗೆ ನೀಡಬಾರದು ಎಂದು ನಿತ್ಯಾನಂದ ಸ್ವಾಮಿ ಭಕ್ತರು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಒಂದು ವೇಳೆ ಸಮಾಧಿ ಸ್ಥಳಾಂತರಿಸಿದರೆ ನಿತ್ಯಾನಂದ ಸ್ವಾಮಿ ಭಕ್ತರು ರಾಜ್ಯಾದ್ಯಂತ ಹೋರಾಟ ಪ್ರತಿಭಟಿಸಲಿದ್ದಾರೆ. ನಿತ್ಯಾನಂದ ಆಶ್ರಮದೊಳಗೆ ಸಮಾಧಿ ನಿರ್ಮಿಸಲಾಗಿದೆ. ಜಾತಿ ಕಾರಣಕ್ಕೆ ಸಮಾಧಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಕೊಲ್ಲೂರು ಆಡಳಿತ ಮಂಡಳಿಯ ಕೃಷ್ಣ ಪ್ರಸಾದ್ ಅಡ್ಯಂತಾಯ ಅವರು ನಿತ್ಯಾನಂದ ಪರಂಪರೆ ಕುರಿತು ಕೇವಲವಾಗಿ ಮಾತನಾಡಿದ್ದಾರೆ. ಜಿಲ್ಲಾಧಿಕಾರಿಗಳು ಪಟ್ಟ ಭದ್ರ ಹಿತಾಸಕ್ತಿಗೆ ಮಣಿಯಬಾರದು, ಸಮಾಧಿ ಸ್ಥಳಾಂತರಕ್ಕೆ ಒಪ್ಪಿಗೆ ನೀಡಬಾರದು ಎಂದು ದ.ಕ. ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.  ವಿಜಯಕುಮಾರ್ ಕೊಡಿಯಾಲಬೈಲ್ ಮತ್ತಿತರರು ನಿಯೋಗದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement