ಹಲ್ಲೆ ಪ್ರಕರಣ; ಆರೋಪಿಗಳ ಸೆರೆ
ಮೂಲ್ಕಿ: ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಕಿನ್ನಿಗೋಳಿ- ಮಂಗಳೂರು ಖಾಸಗಿ ಬಸ್ ಚಾಲಕ, ಸಚ್ಚರಿಪೇಟೆ ನಿವಾಸಿ ಮಸೂದ್ ಎಂಬಾತನಿಗೆ ಇದೇ ಬಸ್ನ ನಿರ್ವಾಹಕ ರಾಜೇಶ್ ಹಾಗೂ ತಂಡ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಮಸೂದ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಮೂಲ್ಕಿ ಠಾಣೆ ಪೊಲೀಸರು ತನಿಖೆ ನಡೆಸಿ ಹಲ್ಲೆ ಪ್ರಕರಣಕ್ಕೆ ಕುಮ್ಮುಕ್ಕು ನೀಡಿದ ಎಸ್ಕೋಡಿಯ ಸುರೇಶ್ ಯಾನೆ ಡಿಲ್ಲಿ ಮತ್ತು ರಾಕೇಶ್ ಎಂಬರವನ್ನು ಬಂಧಿಸಿದ್ದಾರೆ.