ನಕಲಿ ಛಾಪಾ ಕಾಗದ: ಇಬ್ಬರಿಗೆ ಜಾಮೀನು
ಸುಳ್ಯ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಸಿಒಡಿ ತನಿಖೆ ನಡೆಯುತ್ತಿರುವ ಸುಳ್ಯದ ನಕಲಿ ಛಾಪಾ ಕಾಗದ ಪ್ರಕರಣದ ಪ್ರಮುಖ ಆರೋಪಿ, ನೋಟರಿ ನ್ಯಾಯವಾದಿ ಭೀಮಗುಳಿ ಕೇಶವ ಭಟ್ಗೆ ಪರಾರಿಯಾಗಲು ಸಹಕರಿಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಇಬ್ಬರನ್ನು ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದೆ. ಆರೋಪಿ ಕೇಶವ ಭೀಮಗುಳಿಗೆ ಸಹಕಾರ ನೀಡಿದ್ದ ಆರೋಪದಲ್ಲಿ ಅವರ ಸಹೋದರ ಸುಬ್ರಹ್ಮಣ್ಯ ಶರ್ಮ, ದೇವಿಪ್ರಸಾದ್ರನ್ನು ಪೊಲೀಸರು ಬಂಧಿಸಿದ್ದರು.