ಸಚಿವ ಜೈನ್ ಬಂದರು ಕಾಮಗಾರಿ ಪರಿಶೀಲನೆ
ಮಂಗಳೂರು: ನಾಲ್ಕು ವರ್ಷದಿಂದ ಕುಂಟುತ್ತಾ ಸಾಗಿರುವ ವಾಣಿಜ್ಯ ಬಂದರು ಕಾಮಗಾರಿಯನ್ನು ಮೀನುಗಾರಿಕೆ ಇಲಾಖೆ ಸಚಿವ ಕೆ.ಅಭಯಚಂದ್ರ ಜೈನ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
'ಕುಂಟುತ್ತಾ ಸಾಗಿದ ಕಾಮಗಾರಿ, 2ನೇ ವಾಣಿಜ್ಯ ಬಂದರು ಡಿಸೆಂಬರ್ಗೆ ಸಿದ್ದ' ಹಳೆಬಂದರು ಕಾಮಗಾರಿ ಕುರಿತ ವಿಶೇಷ ವರದಿ ಸೋಮವಾರ ಕನ್ನಡ ಪ್ರಭದಲ್ಲಿ ಪ್ರಕಟವಾಗಿತ್ತು.
ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಮುಗಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ, ಸಚಿವ ಜೈನ್,
57.60 ಕೋಟಿ ವೆಚ್ಚದಲ್ಲಿ ಬಂದರು ಮೇಲ್ದರ್ಜೆಗೇರಿಸುವ ಕಾಮಗಾರಿ ಯೋಜನೆ ಈಗ 98.25 ಕೋಟಿಗೇರಿಸಲಾಗಿದೆ. ನಿಗದಿತ ಸಮಯದಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ.
500 ಕೋಟಿ ವೆಚ್ಚದಲ್ಲಿ ಉಳ್ಳಾಲ ಕೋಟೆಪುರದಲ್ಲಿ 90 ಮೀಟರ್ ಉದ್ದದ ಮೀನುಗಾರಿಕೆ ಜೆಟ್ಟಿ ಕಾಮಗಾರಿ ಪ್ರಗತಿಯಲ್ಲಿದೆ. ಸುಲ್ತಾನ್ ಬತ್ತೇರಿ, ಬೊಕ್ಕಪಟ್ಣದಲ್ಲಿ ವಿಶಾಲ ಮೀನುಗಾರಿಕೆ ಜೆಟ್ಟಿ ಕಾಮಗಾರಿ ನಡೆಯುತ್ತಿದೆ ಎಂದರು.
ಬೋಟ್ಗಳ ಸುಲಭ ಸಂಚಾರಕ್ಕೆ ಹಳೆ ಬಂದರಲ್ಲಿ ಹೂಳೆತ್ತುವ ಕಾಮಗಾರಿ ನಡೆಸಲಾಗುವುದು. ಸುಸಜ್ಜಿತ ಮೀನು ಮಾರುಕಟ್ಟೆ, ಹೂಳು ತುಂಬು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸೀ ಬೆಡ್ ನಿರ್ಮಿಸಲಾಗುವುದು ಎಂದರು.
ಬಳಿಕ ಮೀನುಗಾರಿಕೆ ಮನೆಗಳ ಫಲಾನುಭವಿಗಳಿಗೆ ಚೆಕ್ ವಿತರಿಸಿದರು.
ಲೈಫ್ ಜಾಕೆಟ್, ಮೀನುಗಾರಿಕಾ ಕಿಟ್, ಐಸ್ ದಾಸ್ತಾನು ಪೆಟ್ಟಿಗೆಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಮೇಯರ್ ಮಹಾಬಲ ಮಾರ್ಲ ಇದ್ದರು.