ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೆವಿಜಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಜೈವಿಕ ಇಂಧನ ಅನಿಲೀಕರಣ ಆವಿಷ್ಕಾರ

Vishwanath S
Updated On : 15 Jun 2014, 11:22 am

ಸುಳ್ಯ: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆ ಹಾಗೂ ಇಂಧನ ಕೊರತೆಯಿಂದಾಗಿ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಾರೆ. ಇದನ್ನು ಮನಗಂಡು ಕೆ.ವಿ.ಜಿ ತಾಂತ್ರಿಕ ವಿದ್ಯಾರ್ಥಿಗಳು ಹೊಸ ಯಂತ್ರವೊಂದನ್ನು ಆವಿಷ್ಕಾರ ಮಾಡಿದ್ದಾರೆ. ಈ ಯಂತ್ರ ಒಣ ಜೈವಿಕ ತ್ಯಾಜ್ಯಗಳಾದ ಅಡಕೆ ಸಿಪ್ಪೆ, ಬತ್ತದ ಹೊಟ್ಟು, ತೆಂಗಿನ ಸಿಪ್ಪೆ ಮುಂತಾದ ಕೃಷಿ ತ್ಯಾಜ್ಯಗಳನ್ನು ನಿಯಂತ್ರಿತ ಆಮ್ಲಜನಕದ ಉಪಸ್ಥಿತಿಯಲ್ಲಿ ಉರಿಸಿ ಪ್ರೊಡ್ಯುಸರ್ ಗ್ಯಾಸನ್ನು ಉತ್ಪಾದಿಸಲಾಗುತ್ತದೆ. ಕೃಷಿ ತ್ಯಾಜ್ಯಗಳಿಂದ ಉತ್ಪಾದನೆಯಾದ ಈ ಅನಿಲವನ್ನು ಅಡುಗೆ ಅನಿಲವಾಗಿ ಹಾಗೂ ಡೀಸಿಲ್ ಯಂತ್ರಕ್ಕೆ ಇಂಧನವಾಗಿಯೂ ಬಳಸಬಹುದಾಗಿದೆ. ಈ ಯಂತ್ರಕ್ಕೆ ಯಾವುದೇ ರೀತಿಯ ಯಾಂತ್ರಿಕ ಶಕ್ತಿ ಬೇಕಾಗಿರುವುದಿಲ್ಲ. ಯಂತ್ರ ಅತ್ಯಧಿಕ ಕಾರ್ಯಕ್ಷಮತೆ ಹೊಂದಿದ್ದು ಪರಿಸರ ಸ್ನೇಹಿಯಾಗಿದೆ.  ಈ ಯಂತ್ರವನ್ನು ಕೆ.ವಿ.ಜಿ. ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳಾದ ಪ್ರವೀಣ್, ಅವಿನ್, ನಿಮೇಷ್, ಸಂದೀಪ್ ಇವರು ವಿಭಾಗದ ಪ್ರಾಧ್ಯಾಪಕ ದಿನೇಶ್ ಪಿ. ಮಾರ್ಗದರ್ಶನದಲ್ಲಿ ಆವಿಷ್ಕರಿಸಿದ್ದಾರೆ. ವಿಭಾಗದ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ.ಎಸ್. ಹಾಗೂ ಕಾಲೇಜಿನ ಪ್ರಾಶುಂಪಾಲ ಡಾ. ಎನ್.ಎ.ಜ್ಞಾನೇಶ್ ಪ್ರೋತ್ಸಾಹ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement