ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ನೀಡಲು ಆಗ್ರಹಿಸಿ ಸಚಿವರಿಗೆ ಹೆಗ್ಗಡೆ ಪತ್ರ

Vishwanath S
Updated On : 15 Jun 2014, 11:21 am

ಬೆಳ್ತಂಗಡಿ:  ಬೂದು ಪ್ರದೇಶ ಎಂದು ಬೆಳ್ತಂಗಡಿ, ಬಂಟ್ವಾಳ ಮತ್ತು ಸುಳ್ಯ ತಾಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡದ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮುಖ್ಯಮಂತ್ರಿ, ಇಂಧನ ಸಚಿವ, ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದಿದ್ದಾರೆ.ಬೆಳ್ತಂಗಡಿ, ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಸರ್ಕಾರದ ನಿಯಮದಂತೆ ನೀಡುತ್ತಿಲ್ಲ. 2012ರ ಡಿ. 3ರಿಂದ ಕಪ್ಪು ಮತ್ತು ಬೂದು ತಾಲೂಕುಗಳನ್ನು 35 ತಾಲೂಕುಗಳಿಗೆ ಸೀಮಿತಗೊಳಿಸಿ ಉಳಿದ ತಾಲೂಕುಗಳನ್ನು ಬಿಡುಗಡೆ ಮಾಡಿರುತ್ತದೆ. ಬಿಡುಗಡೆಗೊಂಡ ತಾಲೂಕುಗಳ ಪೈಕಿ ಈ ಮೂರು ತಾಲೂಕು ಸೇರಿದೆ. ಆದೇಶದ ನಂತರ ಇಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಡ್ಡಿ ಇರುವುದಿಲ್ಲ.ಮೆಸ್ಕಾಂ ಲೋಕ ಅದಾಲತ್‌ನಲ್ಲಿ ಕರ್ನಾಟಕ ರಾಜ್ಯ ಪತ್ರದ ಉಲ್ಲೇಖದಂತೆ ವಿದ್ಯುತ್‌ಚಕ್ತಿ ಒದಗಿಸಬೇಕು ಎಂದು ಸೂಚಿಸಿದ್ದರೂ ಮೆಸ್ಕಾಂನವರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಮೆಸ್ಕಾಂ ಸಂಸ್ಥೆಯವರು ದ.ಕ. ಜಿಲ್ಲೆಯ ಈ ಮೂರು ತಾಲೂಕುಗಳಿಗೆ ಸಂಬಂಧಿಸಿ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಕ್ರಮ ಕೈಗೊಳ್ಳು ಸಾಧ್ಯವಿಲ್ಲ ಎಂದು ಸೂಚಿಸಿದಾರೆ. ದ.ಕ. ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ ಮತ್ತು ಸುಳ್ಯ ತಾಲೂಕುಗಳು ಜಲಸಂಪನ್ಮೂಲ ಸಚಿವಾಲಯದಿಂದ ಅಧಿಸೂಚನೆ, ಕರ್ನಾಟಕ ರಾಜ್ಯ ಪತ್ರ ಸಂಖ್ಯೆ 147 ದಿನಾಂಕ 2012ರ ಸೆ. 6ರ ಆದೇಶದೊಳಗೆ ಬರುವುದಿಲ್ಲವಾದ್ದರಿಂದ ದಯವಿಟ್ಟು ಈ ತಾಲೂಕುಗಳ ರೈತರಿಗೆ ವಿದ್ಯುತ್ ಸಂಪರ್ಕ ಒದಗಿಸಲು ಮೆಸ್ಕಾಂನವರಿಗೆ ಆದೇಶ ನೀಡಬೇಕು ಎಂದು ಡಾ. ಹೆಗ್ಗಡೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement