ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಸ್ಕಾನ್ ಬಿಸಿಯೂಟ ವಿತರಣೆ ಉತ್ತಮ: ಸಚಿವ ರೈ ಶ್ಲಾಘನೆ

Rashmi Kasaragodu
Updated On : 18 Jun 2014, 12:44 pm

ಮಂಗಳೂರು: ಅಕ್ಷಯ ಪಾತ್ರೆ ಫೌಂಡೇಶನ್‌ನ 10ನೇ ವಾಹನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಂಗಳವಾರ ಚಾಲನೆ ನೀಡಿದರು.
ನಗರದ ಶ್ರೀನಿವಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಸ್ಕಾನ್ ಸಂಸ್ಥೆಯ ಬಿಸಿಯೂಟ ವಿತರಣೆ ಕಾರ್ಯಕ್ರಮ ಉತ್ತಮ ಕಾರ್ಯ. ಶ್ರೀನಿವಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ 300 ಮಂದಿ ಮಕ್ಕಳು ಕಲಿಯುತ್ತಿರುವುದು ಶ್ಲಾಘನೀಯ ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫೌಂಡೇಶನ್ ಮುಖ್ಯಸ್ಥ ಮಧು ಪಂಡಿತ್ ದಾಸ್, 2000ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಸ್ವತಂತ್ರವಾಗಿ ಪ್ರಾರಂಭಿಸಿದ ಬಿಸಿಯೂಟ ಯೋಜನೆ ಇಂದು ಭಾರತದಲ್ಲಿಯೇ 15 ಲಕ್ಷ ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ. 2020ರೊಳಗೆ ಯೋಜನೆಯಲ್ಲಿ ಭಾರತದ 50 ಲಕ್ಷ ಮಕ್ಕಳಿಗೆ ಊಟ ನೀಡುವ ಚಿಂತನೆಯಿದೆ ಎಂದರು.
 6 ರಾಜ್ಯದ ಮುಖ್ಯಮಂತ್ರಿಗಳಿಂದ ಬಿಸಿಯೂಟ ವಿತರಿಸುವಂತೆ ಬೇಡಿಕೆ ಬಂದಿದೆ. ಒಂದು ಊಟಕ್ಕೆ ಸಂಸ್ಥೆಗೆ ರು. 7.50 ಖರ್ಚು ತಗಲುತ್ತದೆ. ಇದರಲ್ಲಿ ರು. 4.30 ಸರ್ಕಾರ ನೀಡಿದರೆ, ಉಳಿದ ರು. 3 ವೆಚ್ಚವನ್ನು ದಾನಿಗಳಿಂದ ಸರಿದೂಗಿಸಲಾಗುವುದು ಎಂದರು.
 ಶಾಸಕ ಬಿ.ಎ. ಮೈದಿನ್ ಬಾವ ಮಾತನಾಡಿ, ಇಸ್ಕಾನ್ ಸಂಸ್ಥೆ ಸ್ಥಾಪನೆಗೆ ಸುರತ್ಕಲ್ ಬಳಿ ಏಳು ಎಕರೆ ಜಾಗ ಗುರುತಿಸಲಾಗಿದೆ. ಸರ್ಕಾರದೊಂದಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭ ಸುಲ್ತಾನ್ ಬತ್ತೇರಿಯಲ್ಲಿ ಫೌಂಡೇಶನ್ ವತಿಯಿಂದ ನಿರ್ಮಾಣಗೊಂಡ ಅಡುಗೆ ಕೋಣೆಯ 2ನೇ ಹಂತದ ಕಟ್ಟಡವನ್ನು ಸಚಿವ ರಮಾನಾಥ ರೈ ಉದ್ಘಾಟಿಸಿದರು.
 ಕೆಎಂಸಿ ವೈದ್ಯಾಧಿಕಾರಿ ಡಾ. ಮೋಹನ್ ಪೈ, ಫೌಂಡೇಶನ್ ಅಧ್ಯಕ್ಷ ಕಾರುಣ್ಯ ದಾಸ್ ಪಂಡಿತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement