ಶಿಷ್ಯತ್ವ ಸ್ವೀಕಾರ ಪ್ರಕ್ರಿಯೆ ಶುರು
ಉಡುಪಿ: ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಜೂ. 19ರಂದು ಶ್ರೀಮಠದ ಆಡಳಿತಕ್ಕೆ ಒಳಪಟ್ಟ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಂಜಾರುಗಿರಿ ಶ್ರೀದುರ್ಗಾದೇವಿ ಸನ್ನಿಧಿಯಲ್ಲಿ ಶ್ರೀಶ ಎಸ್. ಅವರ ಶಿಷ್ಯತ್ವ ಸ್ವೀಕಾರ ಮಾಡಲಿದ್ದು, ಈ ಪ್ರಯುಕ್ತ ಪೂರ್ವಭಾವಿ ಧಾರ್ಮಿಕ ಅನುಷ್ಠಾನಗಳು ಶ್ರೀಕ್ಷೇತ್ರದಲ್ಲಿ ಸೋಮವಾರದಿಂದ ಪ್ರಾರಂಭಗೊಂಡವು. ಶ್ರೀಮಠದ ವಿದ್ವಾಂಸರಾದ ಶಿಬರೂರು ವಾಸುದೇವ ಆಚಾರ್ಯರ ನೇತೃತ್ವದಲ್ಲಿ ಬ್ರಹ್ಮಕೂರ್ಚ ಹೋಮ, ಪೂರ್ಣ ನವಗ್ರಹ ಶಾಂತಿ, ಚಂಡಿಕಾಯಾಗ, ಚತುರ್ವೇದ ಪಾರಾಯಣ ಪ್ರಾರಂಭವಾದವು. 19ರಂದು ಸನ್ಯಾಸ ಸ್ವೀಕಾರ, ಹೊಸ ನಾಮಕರಣ, ಪಟ್ಟಾಭಿಷೇಕ ನಡೆಯಲಿವೆ.