ಸಿರಿ ಹಬ್ಬ ಉದ್ಘಾಟನೆ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವತಿಯಿಂದ ಬೆಳ್ತಂಗಡಿ ಶ್ರೀ ಕ್ಷೇತ್ರ ಸಂಕೀರ್ಣದಲ್ಲಿ ಸಿರಿ ಸಿದ್ದ ಉಡುಪುಗಳ ಮಾರಾಟ ಮಳಿಗೆಯ ಸಿರಿ ಹಬ್ಬವನ್ನು ಸೋಮವಾರ ನಗರ ಪಂಚಾಯಿತಿ ಅಧ್ಯಕ್ಷೆ ಮುಸ್ತರ್ಜಾನ್ ಮೆಹಬೂಬ್ ಉದ್ಘಾಟಿಸಿದರು.
ಎಸ್.ಕೆ.ಡಿ.ಆರ್.ಡಿ.ಪಿಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಮಾತನಾಡಿದರು.
ಎಸ್ಕೆಡಿಆರ್ಡಿಪಿಯ ಸಿರಿ ನಿರ್ದೇಶಕಿ ಮನೋರಮಾ ಭಟ್, ಪ್ರಗತಿ ನಿರ್ದೇಶಕ ಸಂಪತ್ ಕುಮಾರ್, ಜನಜಾಗೃತಿ ನಿರ್ದೇಶಕ ವಿನ್ಸೆಂಟ್ ವಿ. ಪಾಸ್, ಉಡುಪಿ ನಿರ್ದೇಶಕ ದುಗ್ಗೆ ಗೌಡ, ಒಕ್ಕೂಟದ ಅಧ್ಯಕ್ಷ ಜರ್ಮಾ ಡೇಸಾ, ಸಿರಿ ಸಂಸ್ಥೆಯ ವಿನ್ಸ್ಂಟ್ ಇದ್ದರು.
ಸಿರಿ ಹಬ್ಬವು 2 ತಿಂಗಳ ಕಾಲ ನಡೆಯಲಿದೆ. ಆಧುನಿಕ ಯಂತ್ರಗಳಿಂದ ಉತ್ತಮ ಗುಣ ಮಟ್ಟದ ಸಿರಿ ಶೈನ್ ಹಾಗೂ ಶಮಿಕ್ ಶರ್ಟ್ಗಳು, ಕ್ಯಾಶ್ವಲ್ ಶರ್ಟ್ಗಳು, ಜೀನ್ಸ್ ಪ್ಯಾಂಟ್, ಸೀರೆಗಳು ಇನ್ನಿತರ ಉತ್ಪನ್ನಗಳು ಸಿರಿ ಹಬ್ಬದಲ್ಲಿದೆ.
ಬೆಳ್ತಂಗಡಿ ಯೋಜನಾಧಿಕಾರಿ ರೂಪ ಜಿ. ಜೈನ್ ಸ್ವಾಗತಿಸಿ, ಪ್ರಸ್ತಾವಿಸಿದರು. ಮೇಲ್ವಿಚಾರಕ ಸುರೇಶ್ ಎಸ್. ಕಾರ್ಯಕ್ರಮ ನಿರ್ವಹಿಸಿ, ಸಿರಿ ಯೋಜನಾಧಿಕಾರಿ ರಮೇಶ್ ಪಿ.ಕೆ. ವಂದಿಸಿದರು.