ಪೊಲೀಸ್ ಠಾಣೆಗೆ ಬಂದ ಕನ್ನಡಿ ಹಾವು
ಬೆಳ್ತಂಗಡಿ: ಎರಡು ತಲೆಯ ಕನ್ನಡಿ ಹಾವೊಂದು ಇಲ್ಲಿನ ಪೊಲೀಸ್ ಠಾಣೆಗೆ ಬಂದು ಪೊಲೀಸರನ್ನೇ ಬೆಚ್ಚಿಬೀಳಿಸಿದ ವಿದ್ಯಮಾನ ಶುಕ್ರವಾರ ನಡೆದಿದೆ. ಮೊದಲು ಠಾಣೆಗೆ ಬಂದ ಹಾವು ಬಳಿಕ ಪೊಲೀಸ್ ವಸತಿಗೃಹದತ್ತ ತೆರಳಿದೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಜಾಯ್ ಇದು 'ಕನ್ನಡಿ ಹಾವು' ಎಂದು ಗುರುತಿಸಿದರು. ಭಾರಿ ವಿಷದ ಹಾವಾಗಿರುವ ಈ ಕನ್ನಡಿ ಹಾವಿಗೆ ಸಾಮಾನ್ಯವಾಗಿ ಒಂದೇ ತಲೆ ಇರುತ್ತದೆ. ಇಲ್ಲಿ ಬಂದ ಹಾವು ಮಾತ್ರ ಎರಡು ತಲೆ ಹೊಂದಿ ವಿಶಿಷ್ಟವಾಗಿ ಹುಟ್ಟಿದೆ. ಎರಡು ತಲೆಗಳನ್ನು ಇಟ್ಟುಕೊಂಡು ಬದುಕುವುದು ಮತ್ತು ಸಂಚರಿಸುವುದು ಅದಕ್ಕೆ ಕಷ್ಟವಾಗುತ್ತದೆ ಎಂದು ಜಾಯ್ ವಿವರಿಸಿದರು. ಬೈಕ್ ಪಾರ್ಕಿಂಗ್ ತಾಣಕ್ಕೆ ತೆರಳಿದ ಹಾವು ಯಾರದೋ ಬೈಕ್ನಡಿಗೆ ಬಿದ್ದು ಒಂದು ತಲೆಯನ್ನು ಕಳೆದುಕೊಂಡು ಮೃತಪಟ್ಟಿದೆ.