ರೇಲ್ವೆ ಗೇಟ್ ಜಾಮ್: ರಸ್ತೆ ಸಂಚಾರ ಅಸ್ತವ್ಯಸ್ತ
ಮಂಗಳೂರು: ಪಾಂಡೇಶ್ವರ ರೇಲ್ವೆ ಗೇಟ್ ಬಳಿ ರಾತ್ರಿ 8 ಗಂಟೆಗೆ ಹಾಕಿದ ಗೇಟ್ 11 ಗಂಟೆ ವರೆಗೂ ತೆರೆಯದ ಹಿನ್ನೆಲೆಯಲ್ಲಿ ಪಾಂಡೇಶ್ವರ ಸುತ್ತಮುತ್ತ ಟ್ರಾಫಿಕ್ ಜಾಮ್ ಪರಿಸ್ಥಿತಿ ಉಂಟಾಯಿತು. ರಾತ್ರಿ 8 ಗಂಟೆ ವೇಳೆಗೆ ರೈಲು ಹೋಗುವ ಸಂದರ್ಭ ಹಾಕಿದ ಗೇಟ್ ಬಳಿಕ ಜಾಮ್ ಆಗಿ ತೆರೆಯಲು ಅಸಾಧ್ಯವಾಯಿತು. ಹೀಗಾಗಿ ಬಹು ಹೊತ್ತು ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.