ಹಲ್ಲೆ,ಜೀವ ಬೆದರಿಕೆ
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಉಳೆಪಾಡಿ ನಿವಾಸಿ ಕೃಷ್ಣ ಎಂಬವರಿಗೆ ಐಕಳ ಪಂಚಾಯತ್ ಎದುರುಗಡೆಯ ಆವರಣದಲ್ಲಿ ತಡೆದು ನಿಲ್ಲಿಸಿ ಉಳೆಪಾಡಿ ನಿವಾಸಿ ಶೀನ ಮತ್ತು ಅವರ ಪತ್ನಿ ರುಕ್ಮಿಣಿ ಅವಾಚ್ಯ ಪದಗಳಿಂದ ಬೈದು ಜೀವ ಬೆದರಿಕೆಯೊಡ್ಡಿದ್ದು ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾರ್ಟ್ ಸರ್ಕ್ಯೂಟ್; ಅಂಗಡಿ ಭಸ್ಮ
ಬಂಟ್ವಾಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಕಲ್ಲಡ್ಕ ಪೇಟೆಯಲ್ಲಿ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದೆ. ಮಂಚಿ ಸುರಿಬೈಲು ನಿವಾಸಿ ಅಬ್ದುಲ್ ಹಮೀದ್ (54) ಎಂಬವರಿಗೆ ಸೇರಿದ ಟಿ.ಎಫ್. ಸ್ಟೋರ್ ಬೆಂಕಿಗಾಹುತಿಯಾಗಿದ್ದು, ಸುಮಾರು ರು. 10 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ ಎಂದು ಅಂದಾಜಿಸಲಾಗಿದೆ. ಶುಕ್ರವಾರ ಮುಂಜಾನೆ 3ರ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿದ್ದನ್ನು ಗಮನಿಸಿದ ರಾತ್ರಿ ವೇಳೆ ಕಾರ್ಯನಿರ್ವಹಿಸುವ ಕೆಲ ಸಾರ್ವಜನಿಕರು, ಅಕ್ಕಪಕ್ಕದ ನಿವಾಸಿಗಳು ಬೆಂಕಿ ನಂದಿಸಲು ಯತ್ನಿಸಿದರಾದರೂ ಅದು ಸಫಲವಾಗಲಿಲ್ಲ ಎಂದು ತಿಳಿದುಬಂದಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.