ಅನಧಿಕೃತ ವ್ಯಾಪಾರ ತೆರವು
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಫುಟ್‌ಪಾತ್‌ಗಳಲ್ಲಿ ಫ್ಲೈಓವರ್, ಸೇತುವೆಗಳ ಅಡಿಯಲ್ಲಿ ಅನಧಿಕೃತ ವ್ಯಾಪಾರ ನಡೆಯುತ್ತಿದ್ದು, ಇಧರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ. ಈ ಅನಧಿಕೃತ ವ್ಯಾಪಾರವನ್ನು ತಡೆಗಟ್ಟಲು ಪಾಲಿಕೆ ತೆರವು ಕಾರ್ಯಾಚರಣೆ ನಡೆಸಲಿದೆ. ಅನಧಿಕೃತ ವ್ಯಾಪಾರಸ್ಥರು ತೆರವುಗೊಳಿಸದಿದ್ದರೆ ಮುಂದಿನ ಕಷ್ಟನಷ್ಟಗಳಿಗೆ ಪಾಲಿಕೆ ಜವಾಬ್ದಾರಿಯಲ್ಲ ಎಂದು ಆಯುಕ್ತರ ಪ್ರಕಟಣೆ ತಿಳಿಸಿದೆ.
ಅಭ್ಯರ್ಥಿಗಳ ಖರ್ಚುವೆಚ್ಚ ಅಂಗೀಕಾರ
ಮಂಗಳೂರು: ದ.ಕ.ಲೋಕಸಭೆ ಚುನಾವಣೆ ಖರ್ಚುವೆಚ್ಚ ದಾಖಲೆ ವಿವರವನ್ನು ಚುನಾವಣೆಗೆ ಸ್ಪರ್ಧಿಸಿದ ಎಲ್ಲ 14 ಮಂದಿ ಅಭ್ಯರ್ಥಿಗಳು ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದು, ಅದಕ್ಕೆ ಅಂಗೀಕಾರ ದೊರಕಿದೆ. ಆಯೋಗದ ವೀಕ್ಷಕ ಡಾ.ಶಾಂತೇಶ್ವರ ಸ್ವಾಮಿ ಚುನಾವಣೆ ದಿನಗಳಲ್ಲಿ ಅಭ್ಯರ್ಥಿಗಳ ಖರ್ಚು ವೆಚ್ಚ ಪರಿಶೀಲಿಸಿದ್ದರು. ಅಭ್ಯರ್ಥಿಗಳು ಸಲ್ಲಿಸಿದ ಖರ್ಚು ವೆಚ್ಚವನ್ನು ಚುನಾವಣೆ ವೀಕ್ಷಕರು ಅಂಗೀಕರಿಸಿದ್ದು, ಖಾಸಗಿ ಬಸ್‌ಗಳ ಬಾಡಿಗೆ ಹಾಗೂ ಇತರೆ ಬಿಲ್ಲುಗಳನ್ನು ಪರಿಶೀಲಿಸಿ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.