ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಖಾಸಗಿ ಏಜೆನ್ಸಿಗೆ ಪಿಂಚಣಿ ವಿತರಣೆ ಜವಾಬ್ದಾರಿ ಬೇಡ

Rashmi Kasaragodu
Updated On : 25 Jun 2014, 11:31 am

ಹಿರಿಯೂರು: ಈ ಹಿಂದೆ ಅಂಚೆ ಕಚೇರಿಯಿಂದ ಸಲೀಸಾಗಿ ಬಡವಾಡೆಯಾಗುತ್ತಿದ್ದ ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನಗಳು ಈಗ ಖಾಸಗಿ ಏಜೆನ್ಸಿಯ ಮೂಲಕ ವಿತರಿಸುವ ಪರಿಪಾಠ ಬೆಳೆದ ನಂತರ  ಮೂರು ನಾಲ್ಕು ತಿಂಗಳಾದರೂ ಪಿಂಚಣಿದಾರರಿಗೆ ವೇತನ ಸಿಗದಂತಾಗಿದೆ ಎಂದು ಪಿಂಚಣಿದಾರರು ಆರೋಪಿಸಿದರು.
ಪಿಂಚಣಿದಾರರ ವೇತನ ಪಾವತಿ ಸಂಬಂಧ ಖಾಸಗಿ ಏಜೆನ್ಸಿದಾರರ ವಿಳಂಬ ನೀತಿ ಮತ್ತು ನಿರ್ಲಕ್ಷ್ಯ ಖಂಡಿಸಿ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದ ಪಿಂಚಣಿದಾರರು ಸಕಾಲಕ್ಕೆ ಸರಿಯಾಗಿ ಮನೆಯ ಮುಂದೆ ಬಂದು ಪೋಸ್ಟ್ಮನ್ಗಳು ವೇತನ ತಲುಪಿಸಿ ಹೋಗುತ್ತಿದ್ದರು, ಆದರೆ ಕಳೆದ 2 ವರ್ಷದಿಂದ ಖಾಸಗಿ ಏಜೆನ್ಸಿ ಮೂಲಕ ವಿತರಣೆ ಶುರುಮಾಡಿದ ಮೇಲೆ ನಾವುಗಳು ಸಕಾಲಕ್ಕೆ ಪಿಂಚಣಿಯನ್ನು ಪಡೆದುಕೊಂಡಿಲ್ಲ ಎಂದು ದೂರಿದರು.
ಏಜೆನ್ಸಿ ಪ್ರತಿನಿಧಿ ಹೇಳಿದ ದಿನ ನಾವುಗಳು ನಿರ್ದಿಷ್ಟ ಜಾಗದಲ್ಲಿ ಕಾದು ಕೂತರೆ ಆತ ಅವತ್ತು ನಮಗೆ ಕಾಣಿಸಿಕೊಳ್ಳುವುದೇ ಇಲ್ಲ, ಈ ಕಾರಣಕ್ಕೆ ಆತನನ್ನು ಹುಡುಕಲು ಹೊರಟರೆ ಕೈಗೆ ಸಿಗುವುದೇ ಇಲ್ಲವೆಂಬ ಪರಿಸ್ಥಿತಿ ಉದ್ಭವವಾಗುತ್ತದೆ. ಆದ್ದರಿಂದ  ಪಿಂಚಣಿ ವಿತರಣೆಯ ಕಾರ್ಯ ಮೊದಲಿನಂತೆ ಪೋಸ್ಟ್ ಆಫೀಸ್ ಮೂಲಕ ತಲುಪುವ ವ್ಯವಸ್ಥೆ ಮಾಡಬೇಕು ಮತ್ತು ಏಜೆನ್ಸಿದಾರರಿಗೆ ವಹಿಸಿರುವ ಜವಾಬ್ದಾರಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ವಂದೇ ಮಾತರಂ ಸಂಘಟನೆ ತಾಲೂಕು ಅಧ್ಯಕ್ಷ ಎಂ.ಎಲ್. ಗಿರಿಧರ್, ರಾಜ್ಯ ಕಾರ್ಯದರ್ಶಿ ವಿ.ಅರುಣ್ ಕುಮಾರ್, ಅಶೋಕ್, ವೀರೇಶ್, ಪ್ರತಾಪ್ ಮೊದಲಾದರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement