ಟಿಇಟಿ: ಮರು ಪರೀಕ್ಷೆಗೆ ಆಗ್ರಹ
ಚಳ್ಳಕೆರೆ: ಕಳೆದ ಜೂ22ರಂದು ನಡೆದ ಟಿಇಟಿ ಸ್ಪರ್ಧಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಇದರಿಂದ ಪ್ರಾಮಾಣಿಕವಾಗಿ ಅಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಸರ್ಕಾರ ಕೂಡಲೇ ಮರುಪರೀಕ್ಷೆ ನಡೆಸಬೇಕೆಂದು ಡಿ.ಇಡಿ. ಮತ್ತು ಬಿ.ಇಡಿ. ಪರೀಕ್ಷಾ ಆಕಾಂಕ್ಷಿಗಳು ಮನವಿ ಮಾಡಿದ್ದಾರೆ.
ವಿ.ಕೇಶವಮೂರ್ತಿ, ಡಿ.ಪ್ರದೀಪ್, ಎಂ.ರಾಘವೇಂದ್ರ, ಯು.ರಾಜು, ಪಿ.ಕವಿತಾ, ಎನ್.ಬಿ. ಅನಿತಾ ಮುಂತಾದವರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮಂಗಳವಾರ ತಾಲೂಕು ಕಚೇರಿಗೆ ಆಗಮಿಸಿ ಪರೀಕ್ಷೆಯನ್ನು ಪುನಹ ನಡೆಸಬೇಕೆಂದು ಒತ್ತಾಯಿಸಿದ್ದಾರೆ