ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಟಿ ಮನೆ ದರೋಡೆ ಸಂಚು: ಇಬ್ಬರ ಸೆರೆ

Rashmi Kasaragodu
Updated On : 25 Jun 2014, 12:20 pm

ಬಂಟ್ವಾಳ:  ಕನ್ನಡ ಚಿತ್ರನಟಿಗೆ ಸೇರಿದ ಸಾಲೆತ್ತೂರಿನ ಮನೆಯಲ್ಲಿ ದರೋಡೆಗೆ ಸ್ಕೆಚ್ ರೂಪಿಸುತ್ತಿದ್ದ ಈರ್ವರನ್ನು ಖಚಿತ ಮಾಹಹಿತಿ ಮೇರೆಗೆ ಸಿಸಿಬಿ ಪೊಲೀಸರು ಮಂಗಳವಾರ ಸಂಜೆ ಮಂಗಳೂರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ಬಜಗೋಳಿ ನಿವಾಸಿ ರವಿ,  ಮಂಗಳೂರು ನಿವಾಸಿ ಮಂಜುಳಾ ಹಾಗೂ ಹರೀಶ್ ಎಂದು ಗುರುತಿಸಲಾಗಿದೆ.



ಜುಗಾರಿ ಆಡುತ್ತಿದ್ದವರು ಪೊಲೀಸ್ ವಶಕ್ಕೆ
ಮಂಗಳೂರು: ಜುಗಾರಿ ಆಡುತ್ತಿದ್ದ 17 ಮಂದಿಯನ್ನು ಬಂದರು ಪೊಲೀಸರು ಮಂಗಳವಾರ ಸಂಜೆ ವಶಕ್ಕೆ ಪಡೆದಿದ್ದಾರೆ.  ನಗರದ ಕೆ. ಎಸ್. ರಾವ್ ರಸ್ತೆಯ ಲಾಡ್ಜ್ ಒಂದರಲ್ಲಿ ಆರೋಪಿಗಳು ಜುಗಾರಿ ಆಡುತ್ತಿದ್ದು, ಅವರಿಂದ ರು. 42 ಸಾವಿರ ವಶಕ್ಕೆ ಪಡೆದಿದ್ದಾರೆ.  



ಅನುರಾಧಾ ಕುರುಂಜಿ ಆಯ್ಕೆ
ಸುಳ್ಯ: ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಮ್ಮೂರ ಜಾನಪದ ಯೋಜನೆ' ಕಾರ್ಯಯೋಜನೆಯಡಿ ಕರ್ತವ್ಯ ನಿರ್ವಹಿಸಲು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕಿ ಅನುರಾಧಾ ಕುರುಂಜಿ ಆಯ್ಕೆಯಾಗಿದ್ದಾರೆ.  ನಾಡಿನ ಎಲ್ಲ ಭಾಗದ ಕೆಲವು ಹಳ್ಳಿಗಳನ್ನು ಪ್ರಾತಿನಿಧಿಕವಾಗಿ ಆಯ್ಕೆ ಮಾಡಿಕೊಂಡು ಆ ಊರಿನ ಒಟ್ಟು ಜಾನಪದ ಚಿತ್ರಣ ಕಟ್ಟಿಕೊಡುವ ನಿಟ್ಟಿನಲ್ಲಿ ಹಮ್ಮಿಕೊಂಡ ಯೋಜನೆಯಿದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement