ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನದಿಗೆ ಜೀಪು ಪಲ್ಟಿ: ಮೂವರಿಗೆ ಗಾಯ

Rashmi Kasaragodu
Updated On : 25 Jun 2014, 12:24 pm

ವಿಟ್ಲ: ಕನ್ಯಾನ ಸಮೀಪದ ಶಿರಂಕಲ್ಲು ಎಂಬಲ್ಲಿ ಜೀಪು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಮೂವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಮುಚ್ಚಿರಪದವು ಸಮೀಪದ ಗುರಿಮಾರ್ಗ ಎಂಬಲ್ಲಿನ ಮಡವೂರು ಫರ್ನೀಚರ್ಸ್ ಮಾಲೀಕ ಮೊಯ್ದು ಕುಂಞಗೆ ಸೇರಿದ ಜೀಪನ್ನು ಸಂಶುದ್ದೀನ್ (21) ಎಂಬವರು ಚಲಾಯಿಸಿಕೊಂಡು ಕನ್ಯಾನ ಕಡೆಗೆ ಸಾಗುತ್ತಿದ್ದ ಸಂದರ್ಭ ಶಿರಂಕಲ್ಲು ನದಿಗಿರುವ ಸೇತುವೆಯ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಸುಮಾರು 50 ಅಡಿ ಆಳದ ನದಿಗೆ ಉರುಳಿದೆ.  ಇದರಿಂದ ಚಾಲಕ ಸಹಿತ ಜೀಪಿನಲ್ಲಿದ್ದ ರವಿ (23), ಪುರಂದರ (30) ಎಂಬವರಿಗೆ ಗಾಯವಾಗಿದೆ.  ಗಾಯಾಳುಗಳನ್ನು ಮೊದಲಿಗೆ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಗೆ ವರ್ಗಾಯಿಸಲಾಗಿದೆ.  ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದ ಹಿನ್ನಲೆಯಲ್ಲಿ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement