ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಹಿಂದೂ ರಾಷ್ಟ್ರ ಸ್ಥಾಪನೆಗೆ ಕ್ರಿಯಾಶೀಲರಾಗಿ'

Rashmi Kasaragodu
Updated On : 25 Jun 2014, 12:03 pm

ಮಂಗಳೂರು: ಹಿಂದೂಗಳು ಸಂಘಟಿತರಾಗಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಕ್ರಿಯಾಶೀಲರಾಗಬೇಕು ಎಂದು ಧಾರಾಶಿವದ ದತ್ತ ಮಂದಿರ ಸಂಸ್ಥಾನದ ವಿಶ್ವಸ್ಥ ದತ್ತ ಮಹಾರಾಜ ರೂಯಿಕರ ಹೇಳಿದ್ದಾರೆ.
ಗೋವಾದಲ್ಲಿ ನಡೆಯುವ ಅಖಿಲ ಭಾರತೀಯ ಹಿಂದೂ ಅಧಿವೇಶನದ ಐದನೇ ದಿನ 'ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಸಂತರ ಯೋಗದಾನ' ವಿಚಾರದಲ್ಲಿ ಅವರು ಮಾತನಾಡಿದರು.
ವಿಚಾರವಂತರು, ಬುದ್ಧಿಜೀವಿಗಳು ಹಿಂದೂ ಧರ್ಮದ ವೈರಿಗಳಾಗಿದ್ದು, ಅವರ ವಿಚಾರಗಳಿಗೆ ಮೋಸ ಹೋಗದೆ ಅವನ್ನು ಖಂಡಿಸಬೇಕು. ದೇಶದಲ್ಲಿ ಸಮಾನ ನಾಗರಿಕ ಕಾನೂನು ಇರಬೇಕು ಎಂಬ ಇಚ್ಛೆ ಇಧ್ದರೂ ನೆಹರೂ ಆದೇಶದಿಂದ ಅಂಬೇಡ್ಕರರು ಹಿಂದೂ ಕೋಡ್ ಬಿಲ್ ಮಾಡಿದರು. ಅದರಲ್ಲಿ ಹಿಂದೂಗಳಿಗೆ ದ್ವಿಪತ್ನಿತ್ವ ನಿರ್ಬಂಧಿಸಲಾಯಿತು. ಹಿಂದೂಗಳು ಅದನ್ನು ಸ್ವೀಕರಿಸಿದರು, ಮುಸ್ಲಿಮರು ವಿರೋಧಿಸಿದರು ಎಂದು ನಿವೃತ್ತ ನ್ಯಾಯಾಧೀಶ ಸುಧಾಕರ ಚಪಳಗಾಂವ್ಕರ ಹೇಳಿದರು.
ಸಭೆಯನ್ನುದ್ದೇಶಿಸಿ ಬಾಂಗ್ಲಾದೇಶದ ಶಾಸ್ತ್ರ ಧರ್ಮ ಪ್ರಚಾರ ಸಭಾ ಸದಸ್ಯ ಡಾ.ಕೌಶಿಕಚಂದ್ರ ಮಲಿಕ್, ಬಂಗಾಲದ ಆರ್ಯ ಪ್ರತಿನಿಧಿ ಸಭಾ ವೈದಿಕ ವಕ್ತಾರ ಯೋಗೇಶ ಶಾಸ್ತ್ರಿ, ಒಡಿಶಾ ಕ್ರಿಯಾ ಯೋಗ ಧ್ಯಾನ ಮಂದಿರದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ವಿಭೂತಿ ಭೂಷಣ ಪಿಳ್ಳೆ, ಕಲ್ಯಾಣ ಬಿಜೆಪಿ ಉಪಾಧ್ಯಕ್ಷ ಡಾ.ಉಪೇಂದ್ರ ಡಹಾಕೆ, ತಮಿಳ್ನಾಡಿನ ಹಿಂದೂ ಮಕ್ಕಲ ಮುನ್ನಾನಿ ಸಂಘಟನೆ ಸಂಸ್ಥಾಪಕ ರಾಧಾಕೃಷ್ಣನ್ ಗೋಪಾಲಕೃಷ್ಣನ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement