ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಯಶಸ್ವಿ

Rashmi Kasaragodu
Updated On : 26 Jun 2014, 12:12 pm

ಮಂಗಳೂರು: ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ 12 ವರ್ಷ ಬಾಲಕಿಯ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಬಾಲಕಿಗೆ ಸ್ಕೋಲಿಯೋಸಿಸ್ ಎಂಬ ವೈದ್ಯಕೀಯ ತೊಂದರೆ ಇದ್ದು, ಇದರಲ್ಲಿ ವ್ಯಕ್ತಿಯ ಬೆನ್ನುಮೂಳೆ ಪಕ್ಕಕ್ಕೆ ಬಾಗಿರುತ್ತದೆ. ಆಸ್ಪತ್ರೆಯ ಬೆನ್ನುಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ.ಈಶ್ವರ ಕೀರ್ತಿ ಹಾಗೂ ತಂಡ ಶಸ್ತ್ರಚಿಕಿತ್ಸೆ ನಡೆಸಿ ಬಾಲಕಿಯ ಬೆನ್ನುಮೂಳೆಯನ್ನು ಸಾಮಾನ್ಯ ಸ್ಥಿತಿಗೆ ತಂದರು. 11 ವರ್ಷ ವರೆಗೆ ಬಾಲಕಿ ಜೀವನ ಸಾಮಾನ್ಯವಾಗಿತ್ತು. ನಂತರ ಆಕೆಯ ಬೆನ್ನು ಒಂದು ಪಕ್ಕಕ್ಕೆ ಬಾಗುವುದನ್ನು ತಾಯಿ ಗಮನಿಸಿದ್ದರು. ಆರು ತಿಂಗಳಲ್ಲಿ ಬಾಗುವಿಕೆ ಮತ್ತಷ್ಟು ಜಾಸ್ತಿಯಾಗಿತ್ತು. ಆಕೆಯ ಒಂದು ಭುಜ ಇನ್ನೊಂದಕ್ಕಿಂತ ಎತ್ತರದಲ್ಲಿರುವಂತಾಗಿತ್ತು. ವಿರೂಪತೆ ಕಾಣುತ್ತಿದ್ದುದರಿಂದ ಆಕೆಯನ್ನು ಮೂಳೆತಜ್ಞರಲ್ಲಿ ತೋರಿಸಲಾಯಿತು. 2 ವರ್ಷ ಹಿಂದೆ ನಡೆದ ಶಸ್ತ್ರಚಿಕಿತ್ಸೆ ಬಳಿಕ ಈಗ ಆಕೆ ಗುಣಮುಖವಾಗಿದ್ದು, ಸಾಮಾನ್ಯ ಬದುಕು ನಡೆಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement