ಅಸುರಕ್ಷಿತ ಕೊಳವೆ ಬಾವಿ ಮಾಹಿತಿ: ಡಿಸಿ ಸೂಚನೆ
ಮಂಗಳೂರು: ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊರೆಸಿರುವ ಅಸುರಕ್ಷಿತ ಕೊಳವೆ ಬಾವಿಗಳ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 679 ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 5926 ಸೇರಿದಂತೆ ಒಟ್ಟು 6605 ಕೊಳವೆ ಬಾವಿಗಳಿವೆ. ಇದರಲ್ಲಿ ನಗರ ಸ್ಥಳೀಯ ಸಂಸ್ಥೆ 521, ಗ್ರಾಮಾಂತರ ಪ್ರದೇಶದ 4896 ಒಳಗೊಂಡಂತೆ 5417 ಕೊಳವೆ ಬಾವಿಗಳನ್ನು ಪ್ರಸಕ್ತ ಉಪಯೋಗಿಸಲಾಗುತ್ತಿದೆ ಎಂದರು. ಎಲ್ಲ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ವರದಿ ನೀಡಿ ತಮ್ಮ ವ್ಯಾಪ್ತಿಯಲ್ಲಿರುವ ಅನುಪಯುಕ್ತ ಕೊಳವೆ ಬಾವಿಗಳಿಗೆ ಸಮರ್ಪಕ ಸುರಕ್ಷತೆ ನೀಡಿರುವುದಾಗಿ ವರದಿ ನೀಡಿದ್ದಾರೆ.