ಜಾತಿ, ಆದಾಯ ಪ್ರಮಾಣಪತ್ರ: ಡಿಸಿ ಸೂಚನೆ
ಮಂಗಳೂರು: ಜಾತಿ ಪ್ರಮಾಣ ಪತ್ರದ ಕಾಲಾವಧಿಯು ಅವುಗಳನ್ನು ರದ್ದುಪಡಿಸುವವರೆಗೆ ಹಾಗೂ ಆದಾಯ ಪ್ರಮಾಣ ಪತ್ರವು 5 ವರ್ಷಗಳವರೆಗೆ ಸಿಂಧುತ್ವದಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ.
ಆದ್ದರಿಂದ ಶಾಲೆ-ಕಾಲೇಜುಗಳಲ್ಲಿ ಹೊಸದಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಜರುಪಡಿಸಿಲ್ಲವೆಂಬ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪುನಃ ಈ ವರ್ಷ ಹೊಸದಾಗಿ ಪಡೆಯಲು ಕಡ್ಡಾಯಗೊಳಿಸಬಾರದು. ಈ ಹಿಂದೆ ವಿತರಿಸಲಾಗಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಉಪಯೋಗಿಸಬೇಕೆಂದು ಪ್ರಕಟಣೆಯಲ್ಲಿ ಆದೇಶಿಸಿದ್ದಾರೆ.