ಪಡುಮಲೆ: ಪ್ರಾಯಶ್ಚಿತ ಪೂಜೆ ಜು.1ರಂದು
ಪುತ್ತೂರು: ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಕೋಟಿ- ಚೆನ್ನಯ ಐತಿಹಾಸಿಕ ಕ್ಷೇತ್ರ ಸಂವರ್ಧನ ಪ್ರತಿಷ್ಠಾನ ವತಿಯಿಂದ ಜು.1ರಂದು ಪ್ರಾಯಶ್ಚಿತ ಪೂಜೆ ಹಾಗೂ ಅಘೋರ ಹೋಮ ನಡೆಯಲಿದೆ ಎಂದು ಕ್ಷೇತ್ರ ಸಂವರ್ಧನ ಪ್ರತಿಷ್ಠಾನದ ಸಂಚಾಲಕ ಕೆ.ಸಿ. ಪಾಟಾಳಿ ಹೇಳಿದರು. ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಟಿ- ಚೆನ್ನಯ ಪ್ರತಿಷ್ಠಾನ ವತಿಯಿಂದ ಶ್ರೀ ಕ್ಷೇತ್ರ ಪಡುಮಲೆಯಲ್ಲಿ ಹಮ್ಮಿಕೊಂಡ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿರುವಂತೆ ಪ್ರಾಯಶ್ಚಿತ ಪೂಜೆ, ಪಂಚಪುಷ್ಪ ವನಮಾಲಾರ್ಪಣೆ, ವಿಷ್ಣು ಸಹಸ್ರನಾಮಾರ್ಚನೆ, ಲಕ್ಷ ದೀಪಾರ್ಚನೆ, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ರಾತ್ರಿ 10ರಿಂದ ಪೂಮಾಣಿ, ಕಿನ್ನಿಮಾಣಿ ದೈವಸ್ಥಾನ ವಠಾರದಲ್ಲಿ ಅಘೋರ ಹೋಮ ನಡೆಯಲಿದೆ. ಕುಂಟಾರು ರವೀಶ ತಂತ್ರಿ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.
ಕೆನರಾ ಕಾಲೇಜ್: ಎಬಿವಿಪಿಗೆ ಜಯ
ಮಂಗಳೂರು: ಕೆನರಾ ಕಾಲೇಜ್ ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಲ್ಲ ಸ್ಥಾನಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಂತಿಮ ಬಿಕಾಂ ವಿದ್ಯಾರ್ಥಿ ಮೋಕ್ಷಿತ್ ವಿ. ತನ್ನ ಪ್ರತಿಸ್ಪರ್ಧಿ ವಿಶಾಲ್ ವಿರುದ್ಧ480 ಮತಗಳ ಭಾರಿ ಅಂತರದಿಂದ ಗೆದ್ದಿದ್ದಾರೆ. ಉಪಾಧ್ಯಕ್ಷರಾಗಿ ನವ್ಯ ರಾವ್, ಕಾರ್ಯದರ್ಶಿಯಾಗಿ ನಿಶ್ಚಿತ್,ಜತೆ ಕಾರ್ಯದಶಿಯಾಗಿ ವಿಘ್ನೇಶ್ ಆಯ್ಕಾಗಿದ್ದಾರೆ. ಗೆಲವು ಸಾಧಿಸಿದ ನೂತನ ಪದಾಧಿಕಾರಿಗಳಿಗೆ ಎಬಿವಿಪಿ ಮಂಗಳೂರು ನಗರ ಘಟಕ ಅಭಿನಂದನೆ ಸಲ್ಲಿಸಿದೆ.
ತ್ಯಾಜ್ಯ ವಿಲೇಗೆ 'ಕಸ'ರತ್ತು ಮಾಡಿದ್ರೆ ಸವಲತ್ತು