ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಗಳೂರು, ಕೊಚ್ಚಿನ್ ವಿಮಾನ ನಿಲ್ದಾಣ ಹೈ ಅಲರ್ಟ್

Rashmi Kasaragodu
Updated On : 29 Jun 2014, 2:07 am

ಮಂಗಳೂರು: ವಿಮಾನ ನಿಲ್ದಾಣದಲ್ಲಿದೆ ಬಾಂಬ್ ಇದೆ ಎಂಬ ಹುಸಿ ಕರೆ ಬಂದ ಹಿನ್ನೆಲೆಯಲ್ಲಿ ಸಿಐಎ ನಿರ್ದೇಶಕರ ಸೂಚನೆಯಂತೆ ಮಂಗಳೂರು ಮತ್ತು ಕೊಚ್ಚಿನ್ ವಿಮಾನ ನಿಲ್ದಾಣಗಳಿಗೆ ಬಿಗು ಭದ್ರತೆ ನೀಡಲಾಗಿದೆ.
ದುಬೈಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಇದೆ ಎಂದು ಹೇಳಿದ ಹಿನ್ನೆಲೆಯಲ್ಲಿ ತಪಾಸಣೆ ಬಿಗು ಗೊಳಿಸಲಾಗಿದೆ. ನಿಲ್ದಾಣ ಎಲ್ಲೆಡೆ ತಪಾಸಣೆ ನಡೆಸಿದರೂ ಬಾಂಬ್ ಪತ್ತೆಯಾಗದ ಹಿನ್ನೆಲೆಯಲ್ಲಿ ಹುಸಿ ಕರೆ ಎಂಬುದು ಸಾಬೀತಾಗಿದೆ. ಆದರೆ ನೆರೆಯ ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿಯೂ ಕೂಡಾ ಕಟ್ಟೆಚ್ಚರ ವಹಿಸಲಾಗಿದೆ. ಕಾರ್ಗೊ ಎಕ್ಸರೇ ಸ್ಕ್ಯಾನಿಂಗ್ ಒಂದೇ ಬಾರಿ ಮಾಡಲಾಗುತ್ತಿತ್ತು. ಇದೀಗ  ಎರಡೆರಡು ಬಾರಿ ಸೊತ್ತುಗಳ ಸ್ಕ್ಯಾನಿಂಗ್ ಮಾಡಲಾಗುತ್ತಿದೆ ಎಂದು ವಿಮಾನ ಪ್ರಯಾಣಿಕರು ತಿಳಿಸಿದ್ದಾರೆ.
ಜಗಳ: ಮುತ್ತಪ್ಪ ರೈ ಹತ್ಯೆ ಯತ್ನ ಆರೋಪಿ ಸೆರೆ
ಮಂಗಳೂರು: ಕಾರ್, ಬೈಕ್ ಓವರ್ ಟೇಕ್ ಗಲಾಟೆಯಲ್ಲಿ ಮುತ್ತಪ್ಪ ರೈ ಕೊಲೆ ಯತ್ನ ಆರೋಪಿ ನಾರಾಯಣ ಸಾಲ್ಯಾನ್ ಇಬ್ಬರು ಬೈಕ್ ಸವಾರರ ನಡುವೆ ಗಲಾಟೆ ನಡೆದಿದ್ದು, ಮೂವರು ಏಟು ತಿಂದಿದ್ದಾರೆ. ಸೋಮೇಶ್ವರ ಕಡೆಯಿಂದ ಪ್ರೀತಂ ಮತ್ತು ಸಹೋದರ ಲಲಿತ್ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆಯುವಂತೆ ಓವರ್‌ಟೇಕ್ ಮಾಡಿತ್ತು. ಬೈಕ್ ಸವಾರರು ಕಾರನ್ನು ಅಡ್ಡಗಟ್ಟಿ ನಿಂದಿಸಲು ಆರಂಭಿಸಿದ್ದು, ಕಾರು ಚಾಲಕ ನಾರಾಯಣ ಸಾಲ್ಯಾನ್ ಇಳಿಯುತ್ತಿದ್ದಂತೆ ಹೆಲ್ಮೆಟ್‌ನಿಂದ ಹಲ್ಲೆಗೆ ಯತ್ನಿಸಿದರು. ಸಿಟ್ಟಿಗೆದ್ದ ಸಾಲ್ಯಾನ್ ಪಾರ್ಕ್ ಮಾಡಿದ್ದ ಬೈಕ್‌ನಲ್ಲಿ ರಾಡ್‌ನಿಂದ ಲಲಿತ್ ಮೇಲೆ ಹಲ್ಲೆ ನಡೆಸಿದ್ದಾನೆ. ಬೆದರಿದ ಪ್ರೀತಂ ಓಡಿ ಹೋಗಿದ್ದು, ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉಳ್ಳಾಲ ಪೊಲೀಸರು ನಾರಾಯಣ ಸಾಲ್ಯಾನ್‌ನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳಿವೆ.
ಬೈಕ್, ಕಾರು ಡಿಕ್ಕಿ: ಗಾಯಾಳು ಸಾವು
ಪುತ್ತೂರು: ಕಳೆದ ಗುರುವಾರ ಪುತ್ತೂರು ತಾಲೂಕಿನ ಪರ್ಪುಂಜ ಎಂಬಲ್ಲಿ ಬೈಕ್ ಮತ್ತು ಝೈಲೋ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಚಾಲಕ ಕಾವು ಮಾಡ್ನೂರು ಸಿಆರ್ಸಿ ಕಾಲೊನಿ ನಿವಾಸಿ ಸುಬ್ರಹ್ಮಣ್ಯ ಎಂಬವರ ಪುತ್ರ ಶಶಿಕುಮಾರ್(23) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಾಣಿ ಮೈಸೂರು ರಸ್ತೆಯ ಪರ್ಪುಂಜ ಎಂಬಲ್ಲಿ ಶಶಿಕುಮಾರ್ ಚಲಾಯಿಸುತ್ತಿದ್ದ ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಶಶಿಕುಮಾರ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಪ್ಯ ಪೊಲೀಸರು ಕೇಸು ದಾಖಲಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement