ವರ್ಣ ಜಾಗೃತಿ ಕಾರ್ಯಕ್ರಮ ಜು. 1ರಂದು
ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜು. 1 ರಂದು ಲೇಡಿಹಿಲ್ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ನೇತ್ರಾವತಿ ಅಗತ್ಯ ಹಾಗೂ ಪಶ್ಚಿಮಘಟ್ಟದ ಮಹತ್ವದ ಬಗ್ಗೆ 'ವರ್ಣ ಜಾಗೃತಿ' ಕಾರ್ಯಕ್ರಮ ನಡೆಯಲಿದೆ. ಕಲಾವಿದರಾದ ಗಣೇಶ್ ಸೋಮಯಾಜಿ, ಶರತ್ ಹೊಳ್ಳ, ಪೆರ್ಮುದೆ ಮೋಹನ್ ಕುಮಾರ್, ಶಬ್ಬೀರ್ ಆಲಿ, ತ್ಯಾಗರಾಜ್, ಸಂತೋಷ್ ಅಂದ್ರಾದೆ, ಸಪ್ಮಾ ನೊರೊನ್ಹಾ, ಜೀಮನ್ ಸಾಲಿಯಾನ್, ಭವಾನಿ ಶಂಕರ್, ವಿಲ್ಸನ್ ಡಿಸೋಜ ಪಾಲ್ಗೊಳ್ಳುವರು ಎರ್ದು ಪ್ರೆಸ್ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್ ತಿಳಿಸಿದ್ದಾರೆ.