ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹನೀಫ್ ಅಧಿಕಾರ ಸ್ವೀಕಾರ
ಬಂಟ್ಬಾಳ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷ ಹಾಗೂ ಸದಸ್ಯರ ಪದಗ್ರಹಣ ಸಮಾರಂಭ ಬಿ.ಸಿ. ರೋಡ್ನ ರಂಗೋಲಿ ಸಭಾಭವನದಲ್ಲಿ ಮಂಗಳವಾರ ಜರುಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅವರಿಗೆ ಅಧಿಕಾರದ ಆದೇಶ ಪ್ರತಿ ಹಸ್ತಾಂತರಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಯಾವ ಉದ್ದೇಶಕ್ಕಾಗಿ ಸರ್ಕಾರ ಅಕಾಡಮಿಯನ್ನು ಅಸ್ತಿತ್ವಕ್ಕೆ ತಂದಿದೆಯೋ ಅದರ ಸಫಲತೆಗಾಗಿ ಅಕಾಡಮಿಯ ನೂತನ ಅಧ್ಯಕ್ಷರು ಮತ್ತು ಸದಸ್ಯರು ಶಕ್ತಿ ಮೀರಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಎಲ್ಲರ ಸಲಹೆ, ಸಹಕಾರ ಪಡೆದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಭರವಸೆ ನೀಡಿದರು. ಅಕಾಡಮಿಯ ಸ್ಥಾಪಕಾಧ್ಯಕ್ಷ ಎಂ.ಬಿ. ಅಬ್ದುಲ್ ರಹಮಾನ್, ಅಹಿಂದ ಜನಚಳುವಳಿಯ ಅಧ್ಯಕ್ಷ ವಾಸುದೇವ ಬೋಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ಅಬ್ದುಲ್ ಮಜೀದ್ ಸೂರಲ್ಪಾಡಿ, ಅಝೀರ್ ಬೈಕಂಪಾಡಿ, ಕೆ. ಮುಹಮ್ಮದ್ ಚಿಕ್ಕಮಗಳೂರು ಶುಭಹಾರೈಸಿದರು. ಕಾಂಗ್ರೆಸ್ ಮುಖಂಡರಾದ ಬಿ.ಎಚ್. ಖಾದರ್, ಜಿಪಂ ಸದಸ್ಯ ಪ್ರಕಾಶ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಬೋಳಂತೂರು, ಹಾಜಿ ಅಬ್ದುಲ್ ಖಾದರ್ ಗೋಳ್ತಮಜಲು, ಹಾಜಿ ಅಕ್ರಂ ಮೂಡಿಗೆರೆ ಹಾಗೂ ನೂತನ ಸದಸ್ಯರಾದ ಹಮೀದ್ ಪಡುಬಿದ್ರಿ, ಕೆ. ಇದಿನಬ್ಬ ಬ್ಯಾರಿ, ಎಂ.ಇ. ಮುಹಮ್ಮದ್, ಅಬ್ಬಾಸ್ ಕಿರುಗುಂದ, ಝಹುರಾ ಅಬ್ಬಾಸ್ ಕೃಷ್ಣಾಪುರ ಇದ್ದರು.