ಎತ್ತಿನಹೊಳೆ ಕೈಬಿಡಲು ಕನ್ನಡ ಸೇನೆ ಆಗ್ರಹ
ಪುತ್ತೂರು: ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ದ.ಕ ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ತಿರುಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆ ಜಾರಿಗೊಂಡಲ್ಲಿ ಜಿಲ್ಲೆ ಬರಡಾಗಲಿದ್ದು, ಈ ಯೋಜನೆ ಕೈಬಿಡಬೇಕು ಎಂದು ಕರ್ನಾಟಕ ಕನ್ನಡ ಸೇನೆಯ ಪುತ್ತೂರು ತಾಲೂಕು ಘಟಕ ಮುಖ್ಯಮಂತ್ರಿಗೆ ಮನವಿ ನೀಡಿ ಒತ್ತಾಯಿಸಿದೆ. ಕನ್ನಡ ಸೇನೆಯ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ವಿಜಯ ಭಂಡಾರಿ, ಕೃಷಿ ಘಟಕದ ಅಧ್ಯಕ್ಷ ಅಬ್ದುಲ್ಲಾ ಹಾಜಿ, ಸಂಘಟನಾ ಕಾರ್ಯದರ್ಶಿ ಉಸ್ಮಾನ್ ಮತ್ತು ಹೋಬಳಿ ಅಧ್ಯಕ್ಷ ಭರತ್ ರೈ ಇದ್ದರು.
ನಾಳೆ ತಾಜುಲ್ ಉಲಮಾ ಸಂಸ್ಮರಣೆ
ಪುತ್ತೂರು: ಇತ್ತೀಚೆಗೆ ನಿಧನರಾದ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟ ಹಾಗೂ ಸಮಸ್ತ ಕೇರಳ ಸುನ್ನೀ ಜಯಿಂಯ್ಯತುಲ್ ಉಲಮಾ ಅಧ್ಯಕ್ಷರಾಗಿದ್ದ ತಾಜುಲ್ ಉಲಮಾ ಅವರ ಸಂಸ್ಮರಣೆ ಹಾಗೂ ಸುನ್ನೀ ಆದರ್ಶ ಮಹಾಸಮ್ಮೇಳನ ಮಾ.7ರಂದು ಉಪ್ಪಿನಂಗಡಿಯ ಎವರೆಸ್ಟ್ ಮೈದಾನದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಸಂಚಾಲಕ ಹಬೀಬ್ ನಾಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.