ಎಸ್ಸಿಡಿಸಿಸಿ ಬ್ಯಾಂಕ್ ಬೆಳ್ಮಣ್ ಶಾಖೆ ಉದ್ಘಾಟನೆ ನಾಳೆ
ಮಂಗಳೂರು: ಗ್ರಾಮೀಣ ಪ್ರದೇಶದ ಜನರಿಗೆ ಉತ್ಕೃಷ್ಟ ಸೇವೆ ನೀಡುವ ನಿಟ್ಟಿನಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ 68ನೇ ಶಾಖೆ ಕಾರ್ಕಳ ಬೆಳ್ಮಣ್ಣು ಶ್ರೀಕೃಷ್ಣ ಕಾಂಪ್ಲೆಕ್ಸ್ನಲ್ಲಿ ಮಾ.7ರಂದು ಕಾರ್ಯ ಆರಂಭಗೊಳ್ಳಲಿದೆ. ಸಂಪೂರ್ಣ ಗಣಕೀಕೃತ, ಏಕಗವಾಕ್ಷಿ ಹಾಗೂ ಕೋರ್ ಬ್ಯಾಂಕಿಂಗ್ ಮತ್ತು ಆರ್ಟಿಜಿಎಸ್ ಸೌಲಭ್ಯ ಒದಗಿಸಲಾಗಿದೆ. ಬ್ಯಾಂಕ್ ಅಧ್ಯಕ್ಷ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮೆನೇಜಿಂಗ್ ಟ್ರಸ್ಟಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸುವರು. ಸೇಂಟ್ ಜೋಸೆಫ್ ಚರ್ಚ್ ಧರ್ಮಗುರು ಫಾ.ಲಾರೆನ್ಸ್ ಡಿಸೋಜ ಗಣಕೀಕರಣ ವ್ಯವಸ್ಥೆ ಉದ್ಘಾಟಿಸುವರು. ಜ್ಯೋತಿಷಿ ಬಿ.ವಾಸುದೇವ ತಂತ್ರಿ ಭದ್ರತೆ ಕೋಶ ಉದ್ಘಾಟಿಸುವರು. ಶ್ರೀಕೃಷ್ಣ ಗ್ರೂಪ್ಸ್ ಎಸ್.ಕೆ.ಸಾಲಿಯಾನ್ ಹಾಗೂ ಬೆಳ್ಮಣ್ಣ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ದೇವೇಂದ್ರ ನಾಯಕ್ ಭಾಗವಹಿಸುವರು.