ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕುಕ್ಕಾಜೆ: ನಾಳೆಯಿಂದ ಬಿ.ವಿ. ಕಾರಂತ ನೆನಪಿನ ಸುವರ್ಣ ನಾಟಕೋತ್ಸವ

Mainashree
Updated On : 6 Mar 2014, 11:15 am

ಬಂಟ್ವಾಳ: ರಂಗಕರ್ಮಿ ಬಿ.ವಿ. ಕಾರಂತರ ಹುಟ್ಟೂರು ಮಂಚಿ- ಕುಕ್ಕಾಜೆ ಮತ್ತೆ ನಾಟಕೋತ್ಸವಕ್ಕೆ ಸಜ್ಜಾಗಿದೆ. ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ಆಯೋಜನೆಯಲ್ಲಿ ಮಾ.7, 8 ಮತ್ತು 9ರಂದು ಬಿ.ವಿ. ಕಾರಂತ ನೆನಪಿನ ನಾಟಕೋತ್ಸವ ನಡೆಯಲಿದೆ.
ಶುಕ್ರವಾರ ಸಂಜೆ 6ಕ್ಕೆ ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಸದಾನಂದ ಸುವರ್ಣ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ತುಮರಿ ಕಿನ್ನರ ಮೇಳದ ನಿರ್ದೇಶಕ ಕೆ.ಜಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಕ್ಕಳ ನಾಟಕ ವಿನ್ಯಾಸಕಾರ ಮೋಹನ ಸೋನ ಭಾಗವಹಿಸುವರು. ಸಂಜೆ 6.30ರಿಂದ ಪುತ್ತೂರು ಬಾಲವನ ರಂಗ ತಂಡದ ಸದಸ್ಯರು ಅಭಿನಯಿಸುವ ನಾಟಕ 'ಕೆರೆಗೆ ಹಾರ' ಮೋಹನ ಸೋನ ಮತ್ತು ಚಂದ್ರ ಸೌಗಂಧಿಕಾ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಬಳಿಕ ವೈದೇಹಿ ರಚಿಸಿರುವ, ವೆಂಕಟರಮಣ ಐತಾಳ್ ನಿರ್ದೇಶಿಸಿರುವ ಸುಶೀಲ ಕೆಳಮನೆ ಅಭಿನಯದಲ್ಲಿ 'ಗಿರಿಬಾಲೆ' ಏಕವ್ಯಕ್ತಿ ನಾಟಕ ಪ್ರದರ್ಶನಗೊಳ್ಳಲಿದೆ. 8ರಂದು ಸಂಜೆ 6.30ರಿಂದ ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಡ್ರಾಮಾಟಿಕ್ ಕ್ಲಬ್ ಸದಸ್ಯರು 'ಚೋರಚರಣದಾಸ' ನಾಟಕ ಪ್ರದರ್ಶಿಸಲಿದ್ದಾರೆ. ಮೌನೇಶ ವಿಶ್ವಕರ್ಮ ನಿರ್ದೇಶಿಸಿದ್ದಾರೆ. 9ರಂದು ಮಧ್ಯಾಹ್ನ 2.30ರಿಂದ ಸುಸ್ಥಿರ ರಂಗಭೂಮಿ ಎಂಬ ವಿಷಯದ ಕುರಿತು ಹೀಗೊಂದು ಮಾತುಕತೆ ಎಂಬ ಚರ್ಚಾ ಕಾರ್ಯಕ್ರಮ ನಡೆಯಲಿದೆ. ಚಿಂತಕ ಲಕ್ಷ್ಮೀಶ ತೋಳ್ಪಾಡಿ ಮತ್ತು ಈಶ್ವರಯ್ಯ ಎ. ಇವರ ವಿಶೇಷ ಉಪಸ್ಥಿತಿಯಲ್ಲಿ ನಡೆಯಲಿದ್ದು, ಪ್ರಸಾದ ರಕ್ಷಿದಿ, ಮೋಹನ ಸೋನ, ಐ.ಕೆ. ಬೊಳ್ವಾರು, ಅನಂತಕೃಷ್ಣ ಹೆಬ್ಬಾರ್, ಮೂರ್ತಿ ದೇರಾಜೆ, ಪ್ರ. ತುಕಾರಾಂ ಪೂಜಾರಿ, ದೇವು ಹನೇಹಳ್ಳಿ, ಮೌನೇಶ ವಿಶ್ವಕರ್ಮ, ಜಯಾನಂದ ಪೆರಾಜೆ, ಗೋಪಾಲ ಅಂಚನ್, ಡಾ. ಗಿರೀಶ ಭಟ್ ಅಜೆಕ್ಕಳ, ಉದಯ ಸಾರಂಗ್, ರಾಧೇಶ ತೋಳ್ಪಾಡಿ, ಸುಬ್ಬಪ್ಪ ಕೈಕಂಬ, ಅರವಿಂದ ಕುಡ್ಲ, ಡಾ. ನಾಗವೇಣಿ ಮಂಚಿ, ಶಂಕರ ಪ್ರಸಾದ್ ಕುಂಚಿನಡ್ಕ, ವಸಂತ ಕಜೆ, ತಾರನಾಥ ಕೈರಂಗಳ, ರಾಮಕೃಷ್ಣ ಜೋಶಿ, ಶ್ಯಾಂ ಕುಂಚಿನಡ್ಕ ಭಾಗವಹಿಸುವರು. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಚಿವ ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದು, ಕಲಾ ವಿಮರ್ಶಕ ಎ. ಈಶ್ವರಯ್ಯ ಅತಿಥಿಯಾಗಿ ಭಾಗವಹಿಸುವರು.
ಸಂಜೆ 6.30ರಿಂದ ಜೈ ಕರ್ನಾಟಕ ಸಂಘ ಬೆಳ್ಳೆಕೆರೆ, ಸಕಲೇಶಪುರ ಇದರ ಸದಸ್ಯರು ಅಭಿನಯಿಸುವ ನಾಟಕ ಚಂದ್ರ ಮಂಡಲ(ರಚನೆ, ನಿರ್ದೇಶನ ಪ್ರಸಾದ ರಕ್ಷಿದಿ) ಪ್ರದರ್ಶನಗೊಳ್ಳಲಿದೆ ಎಂದು ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಭಟ್ ಕಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement