ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜನಪ್ರತಿನಿಧಿಗಳಿಗೆ ಸವಾಲು

Rashmi Kasaragodu
Updated On : 8 Mar 2014, 12:30 pm

ಮಂಗಳೂರು: ಎತ್ತಿನಹೊಳೆ ವಿಚಾರದಲ್ಲಿ ದ.ಕ.ಜಿಲ್ಲೆಯ ಜನಪ್ರತಿನಿಧಿಗಳು ಇಲ್ಲಿನ ಜನತೆಗೆ ಹಂತ ಹಂತವಾಗಿ ವಂಚಿಸುತ್ತಿದ್ದಾರೆ. ಹಾಗಾಗಿಯೇ ಯೋಜನೆಗೆ ಶಂಕುಸ್ಥಾಪನೆ ಅಡೆತಡೆ ಇಲ್ಲದೆ ನಡೆದಿದೆ. ಇದರ ಬಗ್ಗೆ ಜನಪ್ರತಿನಿಧಿಗಳು ಜನತೆಗೆ ಸೂಕ್ತ ಉತ್ತರ ನೀಡಬೇಕು, ಇಲ್ಲವಾದರೆ ಚುನಾವಣೆಯಲ್ಲಿ ಜನತೆ ಪಾಠ ಕಲಿಸಲಿದ್ದಾರೆ ಎಂದು ಸಹ್ಯಾದ್ರಿ ಸಂರಕ್ಷಣಾ ಸಂಚಯ ಎಚ್ಚರಿಕೆ ನೀಡಿದೆ. ಜಿಲ್ಲೆಯಾದ್ಯಂತ ನಿರಂತರ ಪ್ರತಿಭಟನೆ, ಚಳುವಳಿ, ವಿರೋಧ ವ್ಯಕ್ತವಾದರೂ ಎತ್ತಿನಹೊಳೆ ಯೋಜನೆಗೆ ಸರ್ಕಾರ ಶಿಲಾನ್ಯಾಸ ಮಾಡಿರುವುದು ಖಂಡನೀಯ. ಇದು ಸರ್ಕಾರ ಜಿಲ್ಲೆಗೆ ಮಾಡಿದ ಘೋರ ಅವಮಾನ. ಲೋಕಸಭಾ ಚುನಾವಣೆಯಲ್ಲಿ ಮತಗಳಿಕೆ ದೃಷ್ಟಿಯಿಂದ ಯಾವುದೇ ಪೂರ್ವ ತಯಾರಿ ಇಲ್ಲದೆ ಶಂಕುಸ್ಥಾಪನೆ ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕಾರಣಕರ್ತರಾದರೂ ಜಿಲ್ಲೆಯ ಸಚಿವರು, ಶಾಸಕರು ಕೂಡ ನೇರ ಹೊಣೆ. ಇವರೆಲ್ಲ ಜಿಲ್ಲೆಯಲ್ಲಿ ಮೌನವಾಗಿದ್ದು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರಕ್ಕೆ ಹೋದರೆ ಯೋಜನೆ ಬೆಂಬಲಿಸಿ ಮಾತನಾಡುತ್ತಾರೆ. ಸಚಿವ ರಮಾನಾಥ ರೈ, ಯು.ಟಿ.ಖಾದರ್ ವಿರೋಧಿಸದೆ ಯೋಜನೆಗೆ ಪರೋಕ್ಷ ಬೆಂಬಲ ನೀಡಿದ್ದಾರೆ ಎಂದು ಸಂಚಯ ಸಂಚಾಲಕ ದಿನೇಶ್ ಹೊಳ್ಳ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement