ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಾಕ್ ಪರ ಘೋಷಣೆ ದೇಶದ್ರೋಹಿ ಕೃತ್ಯ: ಬಜರಂಗದಳ ಖಂಡನೆ

Rashmi Kasaragodu
Updated On : 8 Mar 2014, 12:30 pm

ಮಂಗಳೂರು: ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನರ ಪರ ಮೀರತ್ ಕಾಲೇಜ್ ವಿದ್ಯಾರ್ಥಿಗಳು ಜಿಂದಾಬಾದ್ ಕೂಗಿರುವುದು ದೇಶದ್ರೋಹ ಕೃತ್ಯ ಎಂದು ಬಜರಂಗದಳ ಆಪಾದಿಸಿದೆ. ಸ್ವಾಮಿ ವಿವೇಕಾನಂದ ಕಾಲೇಜ್ ಆಡಳಿತ ಮಂಡಳಿ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡು, ಜಿಲ್ಲಾಡಳಿತ ಕೇಸ್ ದಾಖಲಿಸಿದೆ. ಮತಬ್ಯಾಂಕ್ ರಾಜಕೀಯಕೋಸ್ಕರ ಉತ್ತರ ಪ್ರದೇಶ ಸರ್ಕಾರ ಕೇಸ್ ವಾಪಸ್ ಪಡೆದುಕೊಂಡು ದೇಶದ್ರೋಹಿಗಳನ್ನು ಪರೋಕ್ಷವಾಗಿ ಬೆಂಬಲಿಸಿದೆ. ದೇಶದ ಎಲ್ಲ ಪ್ರಜೆಗಳು ಈ ಘಟನೆಯನ್ನು ಸಾರ್ವಜನಿಕವಾಗಿ ಖಂಡಿಸಬೇಕು ಎಂದು ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್ ವಿನಂತಿಸಿದ್ದಾರೆ.


'ದ್ರೋಹಿಗಳ ಹೆಸರಿಸಿ
ಬಹುಮಾನ ಗೆಲ್ಲಿ'
ಮಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ದ್ರೋಹ ಮಾಡಿದ ಹತ್ತು ಮಂದಿ ಜನಪ್ರತಿನಿಧಿಗಳ ಪಟ್ಟಿಯನ್ನು ದಾರಿ ಸಂಘಟನೆ ಪ್ರಕಟಿಸಿದೆ. ಇದರಲ್ಲಿ ಅತಿ ಹೆಚ್ಚಿನ ದ್ರೋಹ ಬಗೆದವರನ್ನು ಕ್ರಮವಾಗಿ ಒಂದರ ಹಿಂದೆ ಹೆಸರಿಸಿದವರಿಗೆ ವಿಶೇಷ ಬಹುಮಾನ ನೀಡಲಾಗುವುದು ಘೋಷಣೆ ಮಾಡಿದೆ.  ಜಿಲ್ಲೆಯ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಅಭಯಚಂದ್ರ ಜೈನ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮತ್ತು ಶಾಸಕರು, ಸಂಸದರ ಹೆಸರುಗಳನ್ನು ಪ್ರಕಟಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement