ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಚಾಯ್ ಪೆ ಚರ್ಚಾ' ನೇರ ವೀಕ್ಷಣೆಗೆ ನೀತಿ ಸಂಹಿತೆ ಅಡ್ಡಿ

Lingaraj Badiger
Updated On : 9 Mar 2014, 11:25 am

ಮಂಗಳೂರು: ಮಹಿಳಾ ದಿನಾಚರಣೆ ಸಲುವಾಗಿ ಶನಿವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೊಂದಿಗೆ 'ಚಾಯ್ ಪೆ ಚರ್ಚಾ' ಸಂವಾದ ಕಾರ್ಯಕ್ರಮದ ನೇರ ಪ್ರಸಾರ ದ.ಕ.ಜಿಲ್ಲೆಯ 9 ಕಡೆಗಳಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಆದರೆ ಸುರತ್ಕಲ್‌ನಲ್ಲಿ ನೇರ ಪ್ರಸಾರ ವೀಕ್ಷಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿತ್ತು.
 ಸಂಜೆ ನಿಗದಿತ 4 ಗಂಟೆ ಬದಲು ಒಂದು ಗಂಟೆ ವಿಳಂಬವಾಗಿ 5 ಗಂಟೆಗೆ ಮೋದಿ ಜತೆ ಸಂವಾದ ನೇರ ಪ್ರಸಾರ ಶುರುವಾಯಿತು. ಮಂಗಳೂರಿನ ಯೆಯ್ಯಾಡಿ ವರ್ಧಮಾನ ಹೊಟೇಲ್, ಕಾವೂರಿನ ಮಾತೃಶ್ರೀ ಹೊಟೇಲ್, ಜನತಾ ಹೊಟೇಲ್ ಗುರುಪುರ, ಎನ್‌ಐಟಿಕೆ ಬಳಿಯ ಹಾಸ್ಟೇಲ್ ಹಾಗೂ ಕಿನ್ನಿಗೋಳಿ, ಬಂಟ್ವಾಳ, ಬೆಳ್ತಂಗಡಿ, ಸುಳ್ಯಗಳಲ್ಲಿ ಚಾಯ್ ಪೆ ಚರ್ಚಾ ನೇರ ಪ್ರಸಾರ ನಡೆಯಿತು.
 ಸುರತ್ಕಲ್ ಎನ್‌ಐಟಿಕೆ ಬಳಿ ನೇರ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಧಿಕಾರಿಗಳು ನೀತಿಸಂಹಿತೆ ನೆಪವೊಡ್ಡಿ ಪೂರ್ವಾನುಮತಿ ಕಡ್ಡಾಯ ಎಂದರು. ಇದರಿಂದ ನೇರ ಪ್ರಸಾರ ವ್ಯವಸ್ಥೆಯನ್ನು ಮಹಿಳಾ ಹಾಸ್ಟೇಲ್ ಬಳಿಗೆ ಸ್ಥಳಾಂತರಿಸಲಾಯಿತು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮಹಿಳಾ ಸಮಸ್ಯೆ, ಮಹಿಳಾ ಸಬಲೀಕರಣ ಮತ್ತು ಮಹಿಳಾ ಸುರಕ್ಷೆ ವಿಚಾರಗಳ ಬಗ್ಗೆ ಮೋದಿ ನೇರ ಸಂವಾದದಲ್ಲಿ ಪ್ರಸ್ತಾಪಿಸಿದರು. ಎಲ್‌ಸಿಡಿ ಟೀವಿ ಪರದೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಂವಾದ ವೀಕ್ಷಿಸಿದರು ಎಂದು ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಪುಲಸ್ತ್ಯ ರೈ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement