ತುಳುವರ ಜೀವ ಉಳಿಸುವ ಅಭಿಯಾನಕ್ಕೆ ಒಂದು ವರ್ಷ
ಮಂಗಳೂರು: ಬೀಯಿಂಗ್ ತುಳುವ ಫೌಂಡೇಶನ್ ವತಿಯಿಂದ ತುಳುವರ ಜೀವ ಉಳಿಸುವ ಅಭಿಯಾನದ ಪ್ರಥಮ ವರ್ಷಾಚರಣೆ ಬಲ್ಮಠ ಸಹೋದಯ ಹಾಲ್ನಲ್ಲಿ ಮಾ.9 ರಂದು ನಡೆಯಲಿದೆ. 4 ವರ್ಷಗಳ ಹಿಂದೆ ಸ್ಥಾಪನೆಯಾದ ತುಳು ಯೂತ್ ರಾಕ್ಸ್ ಫೇಸ್ ಬುಕ್ ಗ್ರೂಪ್ ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಕ್ಯಾನ್ಸರ್, ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದವರಿಗೆ, ವೃದ್ಧಾಶ್ರಮದವರಿಗೆ, ವಿಕಲಚೇತನ ಮಕ್ಕಳಿಗೆ ಧನಸಹಾಯ ನೀಡಿದೆ. ವರ್ಷಾಚರಣೆ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಸಂಕ ಷ್ಟದಲ್ಲಿರುವ ಬಡವರಿಗೆ ನೆರವು ನೀಡುವ ಕಾರ್ಯಕ್ರಮ ಆಯೋಜಿಸಿದೆ.